ಕ್ರೀಡೆ

ಐಪಿಎಲ್ ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ ಆರ್​ಸಿಬಿ ಗೆ 6 ವಿಕೆಟ್ ​ಗಳ ಗೆಲುವು

ಬೆಂಗಳೂರು: ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ  ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ ಆರ್​ಸಿಬಿ ತಂಡದ 6 ವಿಕೆಟ್ ಗೆಲುವಿಗೆ ನೆರವಾದ ವಿಲಿಯರ್ಸ್, ತಮ್ಮ ಯಶಸ್ಸಿನ ಶ್ರೇಯವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವದ ಅತ್ಯುತ್ತಮ ಮೈದಾನಗಳಲ್ಲಿ ಒಂದು. ಇಲ್ಲಿನ ಫ್ಯಾನ್ಸ್​ಗಳು ನನಗೆ ಸ್ಪೆಷಲ್ ಎಂದು ಆರ್​ಸಿಬಿ ತಂಡದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ನೀಡಿದ 175 ರನ್​ಗಳ ಸವಾಲನ್ನು ಬೆನ್ನಟ್ಟಿದ ಆರ್​ಸಿಬಿ, ಡಿವಿಲಿಯರ್ಸ್ (90*ರನ್, 39 ಎಸೆತ, 10 ಬೌಂಡರಿ, 5 ಸಿಕ್ಸರ್) ಸಾಹಸಿಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಎರಡು ಓವರ್​ಗಳಿರುವಂತೆ 18 ಓವರ್​ಗಳಲ್ಲಿ 4 ವಿಕೆಟ್​ಗೆ 176 ರನ್ ಬಾರಿಸಿ ಗೆಲುವು ಕಂಡಿತು. ಲೀಗ್​ನಲ್ಲಿ ತಂಡದ 2ನೇ ಗೆಲುವಿಗೆ ನಾಯಕ ವಿರಾಟ್ ಕೊಹ್ಲಿ (30 ರನ್, 26 ಎಸೆತ, 2ಬೌಂಡರಿ, 1 ಸಿಕ್ಸರ್), ಕ್ವಿಂಟನ್ ಡಿ ಕಾಕ್ (18), ಕೋರಿ ಆಂಡರ್​ಸನ್ (15) ಹಾಗೂ ಮಂದೀಪ್ ಸಿಂಗ್ (17*) ಕೂಡ ಅಲ್ಪ ಕಾಣಿಕೆ ನೀಡಿದರು.

About the author

ಕನ್ನಡ ಟುಡೆ

Leave a Comment