ಕ್ರೀಡೆ

ಐಪಿಎಲ್: ಧೋನಿ, ರಾಯುಡು ಅಬ್ಬರದಾಟ, ಆರ್ ಸಿಬಿ ವಿರುದ್ಧ 5 ವಿಕೆಟ್ ಜಯ

ಬೆಂಗಳೂರು: ಮಹೇಂದ್ರ ಸಿಂಗ್​ ಧೋನಿ ಹಾಗೂ  ಅಂಬಾಟಿ ರಾಯುಡು ಅವರ ​ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್  ಐದು ವಿಕೆಟುಗಳ  ಭರ್ಜರಿ ಗೆಲುವು ಸಾಧಿಸಿದೆ.
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆರ್ ​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 205 ರನ್​ಗಳಿಸುವ ಮೂಲಕ ಸಿಎಸ್ ಕೆ ಗೆಲುವಿಗೆ 206 ರನ್​ಗಳ ಬೃಹತ್​ ಗುರಿಯನ್ನು ನೀಡಿತು. ಬೃಹತ್ ಮೊತ್ತ ಬೆನ್ನತ್ತಿದೆ ಸಿಎಸ್ ಕೆ ಆರಂಭದಲ್ಲೇ ಶೇನ್ ವಾಟ್ಸನ್ (7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಬಳಿಕ ಬಂದ ಅಂಬಾಟಿ ರಾಯುಡು(82) ಹಾಗೂ ಮಹೇಂದ್ರ ಸಿಂಗ್​ ಧೋನಿ(70*) ಅವರ ಆಕರ್ಷಕ ಅರ್ಧ ಶತಕಗಳ ನೆರವಿನೊಂದಿಗೆ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು. ಆರ್ ಸಿಬಿ ಪರ ಎಬಿ ಡಿವಿಲಿಯರ್ಸ್​(68), ಕ್ವಿಂಟನ್​ ಡಿ ಕಾಕ್​(53) ಹಾಗೂ ಮಂದೀಪ್​ ಸಿಂಗ್​(32) ರನ್ ​ಗಳ ಉತ್ತಮ ಕಾಣಿಕೆ ನೀಡಿದರು. ಆರ್ ​ಸಿಬಿ ಪರ ಯಜುವೇಂದ್ರ ಚಹಾಲ್​ ಎರಡು ವಿಕೆಟ್​ ಪಡೆದರೆ, ಪವನ್​ ನೇಗಿ ಹಾಗೂ ಉಮೇಶ್​ ಯಾದವ್​ ತಲಾ ಒಂದೊಂದು ವಿಕೆಟ್​ ಪಡೆದರು. ಅಂಬಾಟಿ ರಾಯುಡು ರನೌಟ್​ ಆದರು.

About the author

ಕನ್ನಡ ಟುಡೆ

Leave a Comment