ಕ್ರೀಡೆ

ಐಪಿಎಲ್ 10ನೇ ಆವೃತ್ತಿ ವೇಳಾ ಪಟ್ಟಿ ಬಿಡುಗಡೆ

ಮುಂಬೈ: ಐಪಿಎಲ್ 10ನೇ ಆವೃತ್ತಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 5ರಿಂದ ಮೇ 21ರವರೆಗೆ ಪಂದ್ಯಾವಳಿ ನಡೆಯಲಿದೆ. ಉದ್ಘಾಟನಾ ಪಂದ್ಯವು ಹೈದರಾಬಾದ್​ನಲ್ಲಿ ಬೆಂಗಳೂರು-ಹೈದರಾಬಾದ್ ತಂಡದ ನಡುವೆ ನಡೆಯಲಿದೆ. 47 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರತಿ ತಂಡ 14 ಪಂದ್ಯಗಳಲ್ಲಿ ಸೆಣೆಸಲಿವೆ. 10 ಅಂಕಣಗಳಲ್ಲಿ ನಡೆಯಲಿರುವ ಪಂದ್ಯಗಳು ತವರು ನೆಲದಲ್ಲಿ 7 ಪಂದ್ಯಗಳನ್ನು ಆಡಲು ಅವಕಾಶ ಪಡೆದಿವೆ. ಲೋಧಾ ಕಮಿಟಿ ಸೂಚನೆಯಂತೆ ಐಪಿಎಲ್ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment