ಅಂಕಣಗಳು ಕ್ರೀಡೆ

ಐಪಿಎಲ್ 11 ನಂತರ ಮಹಿಳಾ ಐಪಿಎಲ್ ಆರಂಭ

ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇಂದು ಮತ್ತೊಂದು ಹೆಜ್ಜೆ ಇಡಲಿದೆ.ಅದುವೇ ಮಹಿಳಾ ಐಪಿಎಲ್ ಹೌದು, ಐಪಿಎಲ್ 11 ಕೊನೆ ಹಂತಕ್ಕೆ ಬಂದಿದ್ದು ಇಂದಿನಿಂದ ಪ್ಲೇಆಫ್ ನಡೆಯಲಿದ್ದು ಅದರ ಮದ್ಯದಲ್ಲಿ ಮುಂದಿನ ಬಾರೀ ಆಯೋಜಿಸಲು ಉತ್ಸುಕರಾಗಿರುವ ಮಹಿಳಾ ಐಪಿಎಲ್ ಟೂರ್ನಿಯ ಪ್ರಯೋಗಿಕ ಪಂದ್ಯವನ್ನು ಇಂದು ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಬಿಸಿಸಿಐ ಆಯೋಜಿಸಿದೆ.

ಮಹಿಳಾ ಕ್ರಿಕೆಟನ್ನ ಪ್ರೋತ್ಸಾಹಿಸುವ ಸಲುವಾಗಿ ಬಿಸಿಸಿಐ & ಐಪಿಎಲ್ ಮಂಡಳಿಗಳು ಇಂದು ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದನಾ ನಾಯಕತ್ವದ ಟ್ರೇಲ್ ಬ್ಲೇಜರ್ಸ್ ಮತ್ತು ಸ್ಟಾರ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ಫೈಟ್ ತಂಡಗಳು ಮುಖಾಮುಖಿಯಾಗಲಿವೆ.

ವಿದೇಶಿ ಆಟಗಾರ್ತಿಯರು ಆಡಲಿದ್ದು ಪುರುಷರ ಐಪಿಎಲ್ ನಿಯಮದಂತೆ ನಾಲ್ಕು ವಿದೇಶಿ ಆಟಗಾರ್ತಿಯರು ಪಂದ್ಯದಲ್ಲಿ ಇರಲಿದ್ದಾರೆ. ಇ ಹಿಂದೆ ಐಪಿಎಲ್ ಮಾದರಿಯಲ್ಲೇ ಹಲವು ಕ್ರೀಡಾಕೂಟಗಳು ನಡೆದಿದ್ದು ಎಲ್ಲಾ ಯಶಸ್ಸು ಕಂಡಿವೆ.

ಹಾಗೆ ಬಿಸಿಸಿಐ ಮತ್ತು ಐಪಿಎಲ್ ಮಂಡಳಿಗಳ ಇ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.ಭಾರತೀಯ ಮಹಿಳಾ ಕ್ರಿಕೆಟ್ ದೃಷ್ಠಿಯಲ್ಲಿ ಇ ನಡೆ ಮಹತ್ವದ್ದಾಗಿದ್ದು.ವಿಶ್ವ ಮಹಿಳಾ ಕ್ರಿಕೆಟಲ್ಲಿ ಉತ್ತುಂಗದಲ್ಲಿರುವ ನಮ್ಮ ತಂಡಕ್ಕೆ ಹೊಸ ಪ್ರತಿಭೆಗಳನ್ನ ನೀಡುವುದರಲ್ಲಿ ಅನುಮಾನವಿಲ್ಲ.

ಜನರ ಪ್ರತಿಕ್ರಿಯೆ ಮೇಲೆ ಮುಂದಿನ ದಿನಗಳಲ್ಲಿ ಮಹಿಳಾ ಐಪಿಎಲ್ ಆಯೋಜನೆಯ ನಿರ್ಧಾರವಾಗಲಿದೆ.

-ವಿಜಯ್ ರುದ್ರೇಶ್

About the author

ಕನ್ನಡ ಟುಡೆ

Leave a Comment