ಕ್ರೀಡೆ

ಐಪಿಎಲ್ 2018 ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿಯಲ್ಲಿ ತಿದ್ದುಪಡೆ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ಮತದಾನ ನಡೆಯಲಿರುವ ಕಾರಣ 11ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿಯಲ್ಲಿ ಸಣ್ಣ ಮಟ್ಟಿನ ಬದಲಾವಣೆ ಮಾಡಲಾಗಿದೆ.  ಮಂಗಳವಾರ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲಿಯೇ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಮಿತಿ ಐಪಿಎಲ್ 2018ರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದು ಸ್ಪಷ್ಟವಾಗಿದೆ.

ಮೊದಲ ವೇಳಾಪಟ್ಟಿಯಂತೆ ಆರ್​ಸಿಬಿ ಮೇ 12ರಂದು ಡೆಲ್ಲಿ ಡೇರ್​ಡೆವಿಲ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಬೇಕಿತ್ತು. ಅದರೆ ಪರಿಷ್ಕೃತ ವೇಳಾಪಟ್ಟಿಯಲ್ಲಿ ಈ ಪಂದ್ಯವನ್ನು ನವದೆಹಲಿಯಲ್ಲಿ ಆಡಲಿದ್ದಾರೆ.  ಏಪ್ರಿಲ್ 21 ರಂದು ನವದೆಹಲಿಯಲ್ಲಿ ನಡೆಯಬೇಕಿದ್ದ ಡೆಲ್ಲಿ ಡೇರ್​ಡೆವಿಲ್ಸ್ ಹಾಗೂ ಆರ್​ಸಿಬಿ ನಡುವಿನ ಮುಖಾಮುಖಿ ಪಂದ್ಯ  ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಿಗದಿಯಾಗಿದೆ.

ಬೆಂಗಳೂರಿನಲ್ಲಿ ಆರ್ ಸಿಬಿ ಒಟ್ಟು 7 ಪಂದ್ಯಗಳನ್ನಾಡಲಿದ್ದು. ಏಪ್ರಿಲ್ 13ರಂದು ಬೆಂಗಳೂರಿನ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆರ್ ಸಿ ಬಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಬಳಿಕ ಏಪ್ರಿಲ್ 15ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ಆಡಲಿದ್ದು. ಬಳಿಕ ಸತತ 4 ಪಂದ್ಯಗಳು ಅಂದರೆ ಏಪ್ರಿಲ್ 21, ಏಪ್ರಿಲ್ 25, ಏಪ್ರಿಲ್ 29 ಮತ್ತು ಮೇ 1 ರ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ. ಆರ್ ಸಿ ಬಿ ತನ್ನ ಕೊನೆಯ ತವರಿನ ಪಂದ್ಯವನ್ನು ಮೇ 17ರಂದು ಸನ್ ರೈಸರ್ಸ್ ಹೈದರಾಬಾದ್  ತಂಡದ ವಿರುದ್ಧ ಆಡಲಿದೆ ಎಂದು ತಿಳಿಸಿದೆ.

 

 

About the author

ಕನ್ನಡ ಟುಡೆ

Leave a Comment