ಕ್ರೀಡೆ

ಒಂದೆಡೆ ಸೋಲಿನ ಕಹಿ ನೆನಪು; ಈ ಮಧ್ಯೆ ಮೈದಾನದಲ್ಲಿ ಇಶಾಂತ್-ಜಡೇಜಾ ಕಿತ್ತಾಟ, ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ವೇಗಿ ಇಶಾಂತ್ ಶರ್ಮಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಪರಸ್ಪರ ಕಿತ್ತಾಡಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರ್ತ್ ಟೆಸ್ಟ್ ನಲ್ಲಿ ಆಡುವ 11ರ ಬಳಗದಲ್ಲಿ ರವೀಂದ್ರ ಜಡೇಜಾಗೆ ಅವಕಾಶ ಸಿಕ್ಕಿರಲಿಲ್ಲ. ಆಟಗಾರನಿಗೆ ಬದಲಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ ಜಡೇಜಾ ಮತ್ತು ಇಶಾಂತ್ ಶರ್ಮಾ ಮೈದಾನದಲ್ಲಿಯೇ ಜಗಳವಾಡಿಕೊಂಡಿದ್ದಾರೆ. ಇನ್ನು ಅನುಭವಿ ಹಾಗೂ ಹಿರಿಯ ಆಟಗಾರರು ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದು ಟೀ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಕ್ಷೇತ್ರ ರಕ್ಷಣೆ ವಿಚಾರವಾಗಿ ಜಡೇಜಾ ಹಾಗೂ ಇಶಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮಗಿಸಿ ಮುಂದೆ ಹೋಗಿದ್ದ ಇಶಾಂತ್ ಮತ್ತೆ ಜಡೇಜಾ ಕಡೆ ತಿರುಗಿ ಬೆರಳು ಮಾಡಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಕೂಡಲೇ ಮೊಹಮ್ಮದ್ ಶಮಿ ಹಾಗೂ ಕುಲದೀಪ್ ನೋಡಿ ತಕ್ಷಣವೇ ಅಲ್ಲಿಗೆ ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment