ರಾಷ್ಟ್ರ

ಒಂದೇ ವರ್ಷದಲ್ಲಿ ಚಹಾಗೆ 3 ಕೋಟಿ ರೂ.ವೆಚ್ಚ ಮಾಡಿದ ಮಹಾರಾಷ್ಟ್ರ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಕಳೆದ ವರ್ಷದಲ್ಲಿ ಚಹಾ ಮತ್ತು ಉಪಾಹಾರಕ್ಕೆ ಮಾಡಿರುವ ವೆಚ್ಚ ಬರೋಬ್ಬರಿ  ರೂ3.34 ಕೋಟಿ. ಮಾಹಿತಿ ಹಕ್ಕು ಕಾಯ್ದೆ ಮೂಲಕ ಈ ಕುರಿತು ಪಡೆದಿರುವ ವಿವರಗಳನ್ನು ಮುಂಬೈ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಂಜಯ್‌ ನಿರುಪಮ್‌ ಬಹಿರಂಗಪಡಿಸಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಕಚೇರಿಯಲ್ಲಿ ಪ್ರತಿ ದಿನ 18,591 ಕಪ್‌ ಚಹಾ ವಿತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ರೈತರು ಪ್ರತಿ ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಈ ರೀತಿ ಅನಗತ್ಯ ವೆಚ್ಚ ಮಾಡುತ್ತಿರುವುದು ಅಮಾನವೀಯ ಸಂಗತಿ ಎಂದಿದ್ದಾರೆ.

 

 

About the author

ಕನ್ನಡ ಟುಡೆ

Leave a Comment