ರಾಜ್ಯ ಸುದ್ದಿ

ಒಕ್ಕಲಿಗರ ಸಂಘದ ಅಕ್ರಮಕ್ಕೆ ಹೈಕೋರ್ಟ್‌ ಗರಂ

ಬೆಂಗಳೂರು: ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ”ಒಕ್ಕಲಿಗರ ಸಂಘದ ಸದಸ್ಯರಿಂದ ಬಹಳಷ್ಟು ಅಕ್ರಮ ನಡೆದಿದೆ.ಹೈಕೋರ್ಟ್‌ ಕೂಡಾ 3 ಕೋಟಿ ದಂಡ ವಿಧಿಸಿತ್ತು.ಹಾಗಾಗಿ ಆಡಳಿತಾಧಿಕಾರಿಯನ್ನೇ ಮುಂದುವರಿಸಬೇಕು”ಎಂದು ವಾದಿಸಿದರು.

ಆಗ ಜಡ್ಜ್‌, ಹಾಗಿದ್ದರೆ ಅಕ್ರಮ ಎಸಗಿದ ಸಂಘದ ಸದಸ್ಯರಿಗೆ ಶಿಕ್ಷೆ ಇಲ್ಲವೇ? ನಿಯಮದ ಪ್ರಕಾರ ಅವರಿಗೆ ಯಾವ ಶಿಕ್ಷೆ ಇದೆ ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ಕೇಳಿತು. ಅದಕ್ಕೆ ಎ.ಜಿ. ಉದಯ್‌ ಹೊಳ್ಳ, ಸಂಘದ ನಿಯಮದಂತೆ ಸದಸ್ಯರ ವಿರುದ್ಧ ಅಕ್ರಮದ ಆರೋಪದ ಸಾಬೀತಾದರೆ ಒಂದು ಸಾವಿರ ರೂ. ದಂಡ ವಿಧಿಸಬಹುದಷ್ಟೇ ಎಂದರು.

ಅದಕ್ಕೆ ಗರಂ ಆದ ನ್ಯಾಯಮೂರ್ತಿಗಳು ”ಒಕ್ಕಲಿಗರ ಸಂಘದಲ್ಲಿ ಇಷ್ಟೆಲ್ಲಾ ಅಕ್ರಮ ನಡೆದಿವೆಯೇ? ಅಕ್ರಮ ಎಸಗುವ ಸದಸ್ಯರು ಮರುಸ್ಪರ್ಧಿಸದಂತೆ ನಿರ್ಬಂಧಿಸಬೇಕು. ಅಂತಹ ಸಂಘದ ಸದಸ್ಯರ ಆಸ್ತಿ ಜಪ್ತಿ ಮಾಡುವಂತಿರಬೇಕು ಹಾಗೂ ಆ ಸದಸ್ಯರನ್ನು ಜೈಲಿಗೆ ಕಳುಹಿಸುವಂಥಾ ಕಾನೂನಿರಬೇಕು. ಇಲ್ಲವಾದರೆ ಅಕ್ರಮಗಳು ನಿಲ್ಲವುದೇ ಇಲ್ಲ”ಎಂದು ಖಡಕ್‌ ಮಾತುಗಳಲ್ಲಿ ಹೇಳಿದರು. ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

About the author

ಕನ್ನಡ ಟುಡೆ

Leave a Comment