ದೇಶ ವಿದೇಶ

ಒಡಿಶಾದಲ್ಲಿ ಭಾರತೀಯ ವಾಯುಪಡೆಯ ವಿಮಾನ ಅಪಘಾತ

ಒಡಿಶಾ: ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ವಿಮಾನವು ಮಂಗಳವಾರ ಕುಸಿದಿದೆ.ವಿಮಾನದ ಟ್ರೇನಿ ಪೈಲಟ್ ಸುರಕ್ಷಿತವಾಗಿ ಹೊರಹಾಕಲ್ಪಟ್ಟಿದೆ.ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ಹೀಗಾಗಿ ತನಿಖೆ ಪ್ರಾರಂಭಿಸಲಾಗಿದೆ.

ಪಶ್ಚಿಮ ಬಂಗಾಳದ “ಕಲೈಕುಂಡ ಏರ್ ಫೋರ್ಸ್ ಸ್ಟೇಷನ್”ನಿಂದ ಏರ್ಪಡಿಸಿದ ಹಾಕ್ ಏರ್ಕ್ರಾಫ್ಟ್ ದಿನದ ತರಬೇತಿಯಲ್ಲಿ ಅಪಘಾತ ನೆಡೆದಿದೆ ಎಂದು ತಿಳಿದು ಬಂದಿದ್ದು. ಅಪಘಾತಕ್ಕೆ ಕಾರಣ ತನಿಖಾ ನ್ಯಾಯಾಲಯ ತನಿಖೆ ನಡೆಸಲಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.ಬರಿಪದಾದ ಮಹುಲ್ದಗಿರಿ ಗ್ರಾಮದ ಸುಬರ್ಣರೇಖಾದ ಟೋಪಾ ಘಾಟ್ ಪ್ರದೇಶದಲ್ಲಿ ಈ ವಿಮಾನವು ಅಪ್ಪಳಿಸಿತು.

 

About the author

ಕನ್ನಡ ಟುಡೆ

Leave a Comment