ಸುದ್ದಿ

ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಮರಣದಿಂದ ಮನನೋದ  ಎನ್. ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕಾಂಚಿ ಮಠದ  ಜಯೇಂದ್ರ ಸರಸ್ವತಿ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಕಂಚಿ ಪೀಠವು ಹಿಂದೂ ಧರ್ಮದಲ್ಲಿ ಪ್ರಮುಖ ಆಧ್ಯಾತ್ಮಿಕ ಗುರುವಾಗಿದ್ದು ಜಯೇಂದ್ರ ಸರಸ್ವತಿ ಅವರು ತಮ್ಮ ಮಾರ್ಗದರ್ಶನದಲ್ಲಿ ಕಾಂಚಿ ಪೀಠವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ.

“ಅವರು ಮಕ್ಕಳಿಗಾಗಿ ಅನೇಕ ಶಾಲೆಗಳು, ಕಣ್ಣಿನ ಆಸ್ಪತ್ರೆಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ.ಜಯೆಂದ್ರ ಸರಸ್ವತಿಯ ಸಮಾಜದ ಸೇವೆಗಳನ್ನು ಅಮರವೆಂದು ಹೇಳಿದ್ದಾರೆ. ಕಾಂಚಿ ಮಠ ಮುಖ್ಯಸ್ಥ ಸರಸ್ವತಿ ಮಧುಮೇಹದಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಮಠದಲ್ಲಿ ಕುಸಿದು ಬಿದ್ದು ಕಳೆದ ತಿಂಗಳು ಚೆನ್ನೈಯ ರಾಮಚಂದ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಕಾಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರಿಗೆ 82 ವಯಸ್ಸಾಗಿದ್ದು. ಅವರು ಇಂದು ಕಾಂಚೀಪುರಂನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

About the author

ಕನ್ನಡ ಟುಡೆ

Leave a Comment