ಸಿನಿ ಸಮಾಚಾರ

ಕಂಠಸಿರಿಗೆ ಮನಸೋತ ವೃದ್ಧ: ಸರಿಗಮಪ ಋತ್ವಿಕ್ ಗೆ ಕಣ್ಣು ದಾನ ಮಾಡಲು ಮುಂದಾದ ಬಳ್ಳಾರಿ ವ್ಯಕ್ತಿ

ಬೆಂಗಳೂರು: ಕನ್ನಡ ಭಾಷೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪದಲ್ಲಿ ತನ್ನ ಹಾಡಿನಿಂದಲೇ ಎಲ್ಲರ ಗಮನ ಸೆಳೆದಿರುವ ಋತ್ವಿಕ್ ಕಂಠಸಿರಿಗೆ ಮನಸೋತಿರುವ ವೃದ್ಧರೊಬ್ಬರು, ತಮ್ಮ ಕಣ್ಣುಗಳನ್ನು ಗಾಯಕನಿಗೆ ದಾನ ಮಾಡಲು ಮುಂದಾಗಿದ್ದಾರೆ.
ಸರಿಗಮಪ ಕಾರ್ಯಕ್ರಮದಲ್ಲಿ ಕಣ್ಣುಗಳು ಇಲ್ಲದಿದ್ದರೂ ತಮ್ಮ ಕಂಠಸಿರಿಯಿಂದಲೇ ಎಲ್ಲರ ಕಣ್ಮನ ಸೆಳೆದಿರುವ ಗಾಯಕ ಋತ್ವಿಕ್ ಗೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 74 ವರ್ಷದ ವೃದ್ಧ ಸಿದ್ದಲಿಂಗನಗೌಡ ನೇತ್ರದಾನ ಮಾಡಲು ಮುಂದಾಗಿದ್ದಾರೆ.
ದೃಷ್ಟಿ ವಿಕಲ ಚೇತನರಾಗಿದ್ದರೂ ತಮ್ಮ ಅದ್ಭುತ ಕಂಠಸಿರಿಯಿಂದಲೇ ಅಪಾರ ಅಭಿಮಾನಿಗಳನ್ನು ಋತ್ವಿಕ್ ಗಳಿಸಿದ್ದಾರೆ. ಹಾಡುಗಳನ್ನು ಕೇಳುತ್ತಾ ಅವರ ಅಭಿಮಾನಿಯಾದ ಕೊಟ್ಟೂರಿನ ಸಿದ್ದಲಿಂಗನಗೌಡ ಕಣ್ಣುಗಳನ್ನ ದಾನ ಮಾಡಲು ಹಠ ಹಿಡಿದಿದ್ದಾರೆ. ಅದಕ್ಕಾಗಿ ಸಿದ್ದಲಿಂಗನಗೌಡ ಸಿಕ್ಕ ಸಿಕ್ಕವರಲ್ಲಿ ತನ್ನ ಕಣ್ಣು ದಾನದ ಆಸೆ ತಿಳಿಸಿದ್ದಾರೆ

About the author

ಕನ್ನಡ ಟುಡೆ

Leave a Comment