ರಾಜ್ಯ ಸುದ್ದಿ

ಕಂಠೀರವ ಸ್ಟೇಡಿಯಂ ತಲುಪಿದ ಅಂಬಿ ಪಾರ್ಥೀವ ಶರೀರ: ಮೆರವಣಿಗೆಗೆ ಸಿದ್ಧತೆ

ಬೆಂಗಳೂರು: ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಹಿರಿಟ ನಟ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗಿದೆ.
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲು ಈಗಾಗಲೇ ನಿರ್ಧರಿಸಲಾಗಿದ್ದು, ವಿಶೇಷ ಆ್ಯಂಬುಲೆನ್ಸ್ ಮೂಲಕ ಇದೀಗ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಕಂಠೀವ ಸ್ಟುಡಿಯೋದತ್ತ ಕೊಂಡೊಯ್ಯಲಾಗುತ್ತಿದೆ. ಈ ನಡುವೆ ಅಂತ್ಯಸಂಸ್ಕಾರ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮೆರವಣಿಗೆ ಸುಮಾರು 13 ಕಿಲೋಮೀಟಲ್ ಸಾಗದಲಿದ್ದು, ಈ ಹಿನ್ನಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಹಿನ್ನಲೆಯಲ್ಲಿ ಅಂತ್ಯ ಸರ್ಕಾರ ಮುಂದೂಡುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಅಂಬರೀಷ್ ಅವರ ಪಾರ್ಥೀವ ಶರೀರ ಕಂಠೀರವ ಸ್ಟೇಡಿಯಂ ತಲುಪಿದ ಬಳಿಕ 12 ಗಂಟೆಗೆ ಕ್ರೀಡಾಂಗಣದಿಂದ ಯಾತ್ರೆಗೆ ಹೊರಡಲಿದೆ.
ಮೈಸೂರು ಬ್ಯಾಂಕ್ ಸರ್ಕಲ್, ಪ್ಯಾಲೆಸ್ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಆರ್’ಎಂಸಿ ಯಾರ್ಡ್, ಗೊರಗುಂಟೆ ಪಾಳ್ಯ ಸೇರಿದಂತೆ ಸುಮಾರು 13 ಕಿ.ಮೀ ಮೆರವಣಿಗೆ ಮೂಲಕ ಮಧ್ಯಾಹ್ನ 3 ಗಂಟೆಗೆ ಪಾರ್ಥೀವ ಶರೀರ ಕಂಠೀರವ ಸ್ಟುಡಿಯೋಗೆ ಕರೆ ತಲಾರಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment