ರಾಷ್ಟ್ರ ಸುದ್ದಿ

ಕಣಿವೆ ರಾಜ್ಯದಲ್ಲಿ ಮತ್ತೆ ಎನ್ಕೌಂಟರ್: ಓರ್ವ ಉಗ್ರನ ಸೆದೆಬಡಿದ ಸೇನೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿದ್ದು, ಉಗ್ರರು ಮತ್ತು ಸೇನೆಯ ನಡುವೆ ಎನ್ಕೌಂಟರ್ ಆರಂಭವಾಗಿದೆ. ಈ ವೇಳೆ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಕಾಶ್ಮೀರದ ಸೋಪೋರ್ ನ ವಾರ್ಪೋರಾ ಪ್ರಾಂತ್ಯದಲ್ಲಿ ಈ ಎನ್ಕೌಂಟರ್ ನಲ್ಲಿ ನವಡೆಯುತ್ತಿದ್ದು, ಮೂವರು ಶಸ್ತ್ರಸಜ್ಜಿತ ಉಗ್ರರರನ್ನು ಸುತ್ತುವರೆದಿರುವ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ವಾರ್ಪೋರಾದ ಕಟ್ಟಡವೊಂದರಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನೆ ಕೂಡಲೇ ಕಾರ್ಯಾಚರಣೆ ನಡೆಸಿತು. ಈ ವೇಳೆ ಉಗ್ರರು ಮತ್ತು ಸೈನಿಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದ್ದು, ಸೈನಿಕರ ಗುಂಡಿಗೆ ಓರ್ವ ಉಗ್ರಗಾಮಿ ಹತನಾಗಿದ್ದಾನೆ. ಅಂತೆಯೇ ಘಟನಾ ಪ್ರದೇಶದಲ್ಲಿ ಮತ್ತೆ ಇಬ್ಬರು ಉಗ್ರರು ಅಡಗಿ ಕುಳಿತ್ತಿದ್ದು, ಇವರನ್ನು ಮಟ್ಟಹಾಕಲು ಸೇನೆ ಕಾರ್ಯಾಚರಣೆ ಮುಂದುವರೆಸಿದೆ. ಪುಲ್ವಾಮ ಉಗ್ರ ದಾಳಿ ಹಿನ್ನಲೆಯಲ್ಲಿ ಕಾಶ್ಮೀರದಾದ್ಯಂತ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಗೊಳಿಸಲಾಗಿದ್ದು. ಇದರ ನಡುವೆಯೇ ಉಗ್ರರು ರಹಸ್ಯವಾಗಿ ಕುಕೃತ್ಯವೆಸಗಲು ಷಡ್ಯಂತ್ರ ರೂಪಿಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment