ಕ್ರೀಡೆ

ಕಣ್ಣೀರುಡುತ್ತಲೇ ಕ್ರಿಕೆಟ್ ಗೆ ಡೇವಿಡ್ ವಾರ್ನರ್ ವಿದಾಯ

ಸಿಡ್ನಿ: ನಾನು ಇನ್ನೆಂದೂ ಬಾರಿ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ಆಸಿಸ್ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಇಂದು ಹೇಳಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಡೇವಿಡ್ ವಾರ್ನರ್ ಇಂದು ಸಿಡ್ನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಈ ವೇಳೆ ತೀವ್ರ ಭಾವುಕರಾದ ವಾರ್ನರ್ ಇನ್ನೆಂದೂ ಬಾರಿ ಆಸ್ಟ್ರೇಲಿಯಾ ಪರ ಕ್ರಿಕೆಟ್​ ಆಡುವುದಿಲ್ಲ ಎಂದು ಹೇಳಿ ಕಣ್ಣೀರು ಹಾಕುತ್ತಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ನನಗೆ ತಂಡವನ್ನು ಗೆಲ್ಲಿಸುವುದಷ್ಟೇ ಮುಖ್ಯವಾಗಿತ್ತು. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆ. ಇದರಿಂದ ಆಗುವ ವ್ಯಪರಿಕ್ತ ಪರಿಣಾಮ ಅರ್ಥಮಾಡಿಕೊಳ್ಳಲಿಲ್ಲ.

ಈ ಬಗ್ಗೆ ನನ್ನ ಜೀವವಿರುವವರೆಗೂ ಕೊರಗು ಕಾಡುತ್ತದೆ. ಪ್ರಕರಣದಲ್ಲಿ ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಪ್ರಕರಣದಲ್ಲಿ ನಾನು ಬಲಿಪಶುವಾದೆನು ಎಂದೆನಿಸುತ್ತಿದೆ. ಈ ಪ್ರಕರಣ ನನ್ನ ಜೀವನದುದ್ದಕ್ಕೂ ನನ್ನನ್ನು ಕಾಡಲಿದೆ. ನನ್ನ ದೇಶಕ್ಕೆ ಜಯ ದೊರಕಿಸಿಕೊಡಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೂ ಇಡೀ ಪ್ರಕರಣದ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ವಾರ್ನರ್ ಬಾವುಕರಾಗಿ ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment