ಸಿನಿ ಸಮಾಚಾರ

ಕನ್ನಡ ಇಂಡಸ್ಟ್ರಿಗೆ ಬಿಗ್ ಬಾಸ್ ಸ್ವರ್ಧೆ ಲಾಸ್ಯ ನಾಗ್

ಬೆಂಗಳೂರು: ಬಿಗ್ ಬಾಸ್ ಮನೆಗೆ ತೆರಳಿದ್ದ ಶ್ರದ್ಧಾ ಶ್ರೀನಾಥ್ ಹಾಗೂ ಹಿತ ಚಂದ್ರಶೇಖರ್ ಈಗಾಗಲೇ  ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಕೆಲಸ  ಆರಂಭಿಸಿದ್ದಾರೆ, ಆದರೆ ಇವರುಗಳ ಜೊತೆ ಬಿಗ್ ಬಾಸ್ ಮನೆಗೆ ತೆರಳಿದ್ದ ಲಾಸ್ಯ ನಾಗ್ ನಿಧಾನವಾಗಿ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಬೇರೆ ನಟಿಯರಿಗೆ ದೊಡ್ಡ ದೊಡ್ಡ ಆಫರ್ ಗಳು ಸಿಕ್ಕಿವೆ, ಆದರೆ ನಿಧಾನವಾಗಿ ಇಂಡಸ್ಟ್ರಿಯಲ್ಲಿ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ, “ಸ್ಲೋ ಅಂಡ್ ಸ್ಟಡಿ ವಿನ್ ದಿ ರೇಸ್” ಎಂಬ ಗಾದೆ ಮಾತಿನಂತೆ ನಡೆಯಲು ತೀರ್ಮಾನಿಸಿದ್ದಾರೆ. ದೊಡ್ಡ ಪರದೆ ಮೇಲೆ ತಮ್ಮನ್ನು ನೋಡಲು ಲಾಸ್ಯ ಕಾಯುತ್ತಿದ್ದಾರೆ.

“ಅಸತೋಮ ಸದ್ಗಮಯ” ಸಿನಿಮಾದಲ್ಲಿ ರಾಧಿಕಾ ಚೇತನ್ ಜೊತೆ ಪರದೆ ಹಂಚಿಕೊಂಡಿದ್ದಾರೆ,ಇನ್ನೂ ಉಪೇಂದ್ರ ಅಭಿನಯದ “ಹೋಮ್ ಮಿನಿಸ್ಟರ್” ಹಾಗೂ “ಅಂಬಿ ನಿಂಗ್ ವಯಸ್ಸಾಯ್ತೋ” ಸಿನಿಮಾಗಳಲ್ಲಿ ಲಾಸ್ಯ ನಟಿಸುತ್ತಿದ್ದಾರೆ.ಲಾಸ್ಯ ಯುವಿನ್ ಮೊದಲ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿರುವ ಲಾಸ್ಯ ತುಂಬಾ ಉತ್ಸುಕರಾಗಿದ್ದಾರೆ.

ತಮ್ಮ ಸ್ನೇಹಿತರಾದ ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್ ಮತ್ತು ಶೃತಿ ಹರಿಹರನ್ ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.ನಿಧಾನವಾಗಿ ನೀವು ಕೆಲಸ ಆರಂಭಿಸಿದರೇ ಉತ್ತಮ ಮಾರ್ಗದಲ್ಲಿ ಒಳ್ಳೆಯ ಹೆಸರು ಗಳಿಸಬಹುದಾಗಿದೆ ಎಂದು ಕೇಳಿದ್ದಾಗ ಅವರು ಹೇಳಿದ್ದು ಇಗೆ ಇದರಿಂದ ನಾನು ಸಂತೋಷವಾಗಿದ್ದೇನೆ ಆದರೆ ನನ್ನ ಸಿನಿಮಾ ಪ್ರಯಾಣ ಯಶಸ್ವಿಯಾಗಿರುತ್ತದೆ ಎಂದು ಹೇಳುತ್ತಾ ಹಾದಿ ಕಠಿಣವಾಗಿದ್ದರೇ ಉತ್ತಮ ಪಾಠ ಕಲಿಯುತ್ತೇವೆ ಎಂದು ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment