ಸಿನಿ ಸಮಾಚಾರ

ಕನ್ನಡ ಚಿತ್ರದ ಹಾಡಿಗೆ ನಟ ಅಮಿತಾಭ್‌ ಬಚ್ಚನ್‌ ಧ್ವನಿ

ಬಾಲಿವುಡ್‌ನ‌ ಬಿಗ್‌ ಬಿ ಖ್ಯಾತಿಯ ನಟ ಅಮಿತಾಭ್‌ ಬಚ್ಚನ್‌ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಗೀತೆಗೆ ಧ್ವನಿಯಾಗಿದ್ದಾರೆ. ರಮೇಶ್‌ ಅರವಿಂದ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಬಟರ್‌ ಫ್ಲೈ’ ಚಿತ್ರದ ಬರುವ ಹಾಡಿಗೆ ಅಮಿತಾಭ್‌ ಬಚ್ಚನ್‌ ಧ್ವನಿಯಾಗಿದ್ದು, ಇತ್ತೀಚೆಗೆ ಈ ಹಾಡಿನ ಮುದ್ರಣ ಕಾರ್ಯ ಪೂರ್ಣಗೊಂಡಿದೆ ಎಂದು ಚಿತ್ರದ ನಾಯಕಿ, ಸಹ ನಿರ್ಮಾಪಕಿ ಪಾರುಲ್‌ ಯಾದವ್‌ ತಿಳಿಸಿದ್ದಾರೆ. 978ರಲ್ಲಿ ತೆರೆಕಂಡ “ದೇವದಾಸಿ’ ಚಿತ್ರದ “ಸುಖವೀವ ಸುರಪಾನವಿದು ಸ್ವರ್ಗ ಸಮಾನಂ.’ ಹಾಡು “ಬಟರ್‌ ಫ್ಲೈ’ ಚಿತ್ರದಲ್ಲಿ ಮರುಬಳಕೆ ಮಾಡಿಕೊಳ್ಳಲಾಗಿದೆ. ಈ  ಹಾಡಿಗೆ ಸಂಗೀತ ನಿರ್ದೇಶಕ ಅಮಿತ್‌ ತ್ರಿವೇದಿ ಮರು ಸಂಗೀತ ಸಂಯೋಜಿಸಿದ್ದು, ರ್ಯಾಪ್‌ ಶೈಲಿಯಲ್ಲಿರುವ ಈ ಹಾಡನ್ನು ಅಮಿತಾಭ್‌ ಕಂಠದಲ್ಲಿ ಚಿತ್ರತಂಡ ಹಾಡಿಸಿದೆ. ಇನ್ನು “ಬಟರ್‌ ಫ್ಲೈ’ ಚಿತ್ರ ಕನ್ನಡದ ಜೊತೆ ತೆಲುಗು ಮತ್ತು ತಮಿಳಿನಲ್ಲೂ ನಿರ್ಮಾಣವಾಗುತ್ತಿದ್ದು, ಇದೇ ಮೇ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

About the author

ಕನ್ನಡ ಟುಡೆ

Leave a Comment