ಸಿನಿ ಸಮಾಚಾರ

ಕನ್ನಡ ಚಿತ್ರರಂಗದ ದಾಖಲೆಗಳೆಲ್ಲಾ ಧೂಳಿಪಟ ಮಾಡಿದ ದಿ ವಿಲನ್, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತ

ಅಭಿನಯ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ದಿ ವಿಲನ್ ಚಿತ್ರ ದಸರಾ ಪ್ರಯುಕ್ತ ನಿನ್ನೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು ಮೊದಲ ದಿನದ ಕಲೆಕ್ಷನ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನಿನ್ನೆ ಜಗತ್ತಿನಾದ್ಯಂತ 1000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಕರ್ನಾಟಕದಲ್ಲೇ 500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಹುನಿರೀಕ್ಷೆ ಮೂಡಿಸಿದ್ದ ದಿ ವಿಲನ್ ಚಿತ್ರದ ಟಿಕೆಟ್ ಗಳು ಚಿತ್ರ ಬಿಡುಗಡೆಗೂ ಮುನ್ನ ಸೋಲ್ಡ್ ಔಟ್ ಆಗಿದ್ದವು. ಸದ್ಯ ದಿ ವಿಲನ್ ಚಿತ್ರದ ಮೊದಲ ಕಲೆಕ್ಷನ್ ನೋಡಿದರೆ ಕನ್ನಡ ಚಿತ್ರರಂಗದ ಮೊದಲ ದಿನದ ಕಲೆಕ್ಷನ್ ಗಳನ್ನು ಧೂಳಿಪಟ ಮಾಡಿದೆ. ದಿ ವಿಲನ್ ಚಿತ್ರ ಕರ್ನಾಟಕದಲ್ಲಿ 6.50 ಕೋಟಿ ಗಳಿಕೆ ಮಾಡಿದ್ದು ದೇಶಾದ್ಯಂತ 12.50 ಕೋಟಿ ಗಳಿಕೆ ಮಾಡಿದೆಯಂತೆ. ಇನ್ನು ದಸರಾ ಹಬ್ಬದ ರಜೆ ಇರುವುದರಿಂದ ಇನ್ನೂ ಮೂರು ದಿನಗಳ ಕಾಲ ಚಿತ್ರ ಉತ್ತಮ ಪ್ರದರ್ಶನ ಕಾಣುವ ಸಾಧ್ಯತೆ ಇದ್ದು ಮೊದಲ ವಾರದಲ್ಲೇ 50 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

About the author

ಕನ್ನಡ ಟುಡೆ

Leave a Comment