ರಾಜಕೀಯ

ಕನ್ನಡ ಧ್ವಜಕ್ಕೆ ವಾಟಾಳ್ ವಿರೋಧ

ಬೆಂಗಳೂರು: ಕನ್ನಡ ನೂತನ ಬಾವುಟಕ್ಕೆ ಕೆಲ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.ನಗರದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಕನ್ನಡ ಓಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರ ನೂತನ ಬಾವುಟಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಯಾವುದೇ ಬಾವುಟ ಮಾಡಲಿ ನಮ್ಮ ಅಧಿಕೃತ ಬಾವುಟ ಹಳದಿ ಕೆಂಪು.ನಾವು ಹೊಸ ಬಾವುಟವನ್ನು ತೆಗಿದುಕೊಳ್ಳುವುದಿಲ್ಲ. ನಮ್ಮ ಹೋರಾಟ ಹಾಗೂ ಚಳುವಳಿಗೆ ಹಳದಿ ಕೆಂಪು ಬಾವುಟಕ್ಕೆ 60 ವರ್ಷದ ಇತಿಹಾಸವಿದೆ. ಜನರ ಮನದಲ್ಲಿ ಮನೆಮಾಡಿದೆ.

ಇತಂಹ ಬಾವುಟವನ್ನು ಯಾವುದೇ ಸರ್ಕಾರ,ರಾಜಕಾರಣೆಗಳು ಸಾಹಿತ್ಯಗಳು ಇದುವರೆಗೂ ಕೂಡ ಯಾರು ವಿರೋಧ ಮಾಡಿಲ್ಲ.ದೇಶ ವಿದೇಶದಲ್ಲಿ ಈ ಬಾವುಟ ರಾರಾಜಿಸಿದೆ. ಇತಂಹ ಪ್ರೀತಿ ಬಾವುಟದ ಬದಲಾವಣೆ ಅವಶ್ಯಕತೆ ಇರಲಿಲ್ಲ.  ಈ ಕೆಲ ಸಾಹಿತಿಗಳಿಗೆ ಬಾವುಟದ ಬಗ್ಗೆ ಸ್ವಲ್ಪನು ಜ್ಞಾನ ಹಾಗೂ ಇತಿಹಾಸ ಗೋತ್ತಿಲ್ಲ ಅಂತಾ ಕಿಡಿಕಾರಿದ್ರು.

ಮುಖ್ಯಮಂತ್ರಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸುತ್ತೆವೆ.ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಿದ್ದೆವೆ ಎಂದು ಹೇಳಿದ್ದರು.

About the author

ಕನ್ನಡ ಟುಡೆ

Leave a Comment