ರಾಷ್ಟ್ರ ಸುದ್ದಿ

ಕನ್ನಡ ಸುಂದರವಾದ ಭಾಷೆ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌

ಬೆಂಗಳೂರು: ಕನ್ನಡ ಪ್ರಧಾನಿ ಮೋದಿ ಭಾಷೆಯನ್ನು ಹೊಗಳಿದ್ದಾರೆ. ಕನ್ನಡ ಒಂದು ಸುಂದರ ಭಾಷೆ ಎಂದು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕೊಂಡಾಡಿದ್ದಾರೆ. ಮೋದಿ ಅಭಿಮಾನಿಯೊಬ್ಬರ ಟ್ವೀಟ್‌ವೊಂದಕ್ಕೆ ಸ್ವತ: ಮೋದಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಅಭಿಮಾನಿ ಸಹನಾ (ರೇಣುಕಾ) ಹೋಳಿಮಠ ಎಂಬುವವರು ಕಳೆದ ಬುಧವಾರ ( ಮಾರ್ಚ್ 6, 2019) ರಂದು, ”ಮೋದಿಜೀ ಕನ್ನಡದಲ್ಲಿ ಮಾತನಾಡಿದ ಆ ಕ್ಷಣ ಎಷ್ಟು ಖುಷಿ ಆಗುತ್ತೆ ಅಲ್ವಾ?” ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಸೋಮವಾರ (ಮಾರ್ಚ್‌ 11,2019)ರಂದು ಟ್ವೀಟ್‌ ಮೂಲಕ ಉತ್ತರಿಸಿದ ಪ್ರಧಾನಿ ಮೋದಿ, ”ಕನ್ನಡ ಒಂದು ಸುಂದರ ಭಾಷೆ” ಎಂದು ವರ್ಣನೆ ಮಾಡಿದ್ದಾರೆ.

ಪ್ರಧಾನಿ ಮೋದಿಯ ಈ ಟ್ವೀಟ್‌ಗೆ ಕನ್ನಡಿಗರಿಂದ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ಟ್ವೀಟ್‌ ಅನ್ನು 4 ಸಾವಿರಕ್ಕೂ ಅಧಿಕ ನೆಟ್ಟಿಗರು ರೀ ಟ್ವೀಟ್‌ ಮಾಡಿದ್ದು, 17 ಸಾವಿರಕ್ಕೂ ಅಧಿಕ ಟ್ವೀಟಿಗರು ಲೈಕ್‌ ಕೊಟ್ಟಿದ್ದಾರೆ. ಅಲ್ಲದೆ, ಪ್ರಧಾನಿಯ ಟ್ವೀಟ್‌ಗೆ ಹಲವು ಕನ್ನಡಿಗರು ಪ್ರತಿಕ್ರಿಯೆ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಕರ್ನಾಟಕದಲ್ಲಿ ಭಾಷಣ ಮಾಡುವಾಗ, ಭಾಷಣದ ಆರಂಭದಲ್ಲಿ ಅವರು ಕೆಲವು ಸಾಲುಗಳನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಇದೇ ರೀತಿ, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಮೋದಿ ಕಲಬುರಗಿಯಲ್ಲಿ ಬಿಜೆಪಿ ರ‍್ಯಾಲಿ ವೇಳೆ ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ್ದರು. ಈ ಹಿನ್ನೆಲೆ ಮೋದಿ ಅಭಿಮಾನಿ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿರುವ ಸಹನಾ (ರೇಣುಕಾ) ಹೋಳಿಮಠ ಎಂಬುವವರು ಮೋದಿಯ ಕನ್ನಡ ಭಾಷೆ ಹೊಗಳಿ ಟ್ವೀಟ್‌ ಮಾಡಿದ್ದರು.

 

About the author

ಕನ್ನಡ ಟುಡೆ

Leave a Comment