ಸಿನಿ ಸಮಾಚಾರ

ಕಪಿಲ್ ಮುಂದೆ ಕನ್ನಡ ಮಾತನಾಡಿದ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರು ಬಾಲಿವುಟ್ ಫೇಮಸ್ ಟಾಕ್ ಶೋ ‘ಕಪಿಲ್ ಶರ್ಮಾ ಶೋ’ದಲ್ಲಿ ಕನ್ನಡದಲ್ಲಿ ಮಾತನಾಡಿ ಗಮನಸೆಳೆದಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಕನ್ನಡದ ಕಂಪನ್ನು ಹರಡಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್.

ಹೌದು, ತಮ್ಮ ಪೈಲ್ವಾನ್ ಚಿತ್ರದ ಪ್ರಮೋಶನ್ ಕಾರ್ಯಕ್ರಮಕ್ಕೆ ಸಂಬಂಧಿಸಿ ಮುಂಬೈನಲ್ಲಿ ‘ಕಪಿಲ್ ಶರ್ಮಾ ಶೋ’ದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್, “ನಮಸ್ತೇ, ಕಪಿಲ್ ಶರ್ಮಾ ಶೋಗೆ ಸ್ವಾಗತ. ನಾನು ನಿಮ್ಮ ಕಿಚ್ಚ ಸುದೀಪ್, ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೀನಿ” ಎಂದು ಹೇಳುವ ಮೂಲಕ ಕರ್ನಾಟಕದ ಬೆಂಗಳೂರು ಮತ್ತು ಕನ್ನಡ ಭಾಷೆಯ ಕಂಪನ್ನು ಮುಂಬೈನಲ್ಲಿ ಹರಡಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಪಿಲ್ ಶರ್ಮಾ ಶೋದಲ್ಲಿ ಸುದೀಪ್ ಬಹಳಷ್ಟು ಎಂಜಾಯ್ ಮಾಡಿ ಆ ಶೋ ಬಗ್ಗೆ ಒಳ್ಳೆಯ ಮಾತುಗಳನ್ನು ಕೂಡ ಆಡಿದ್ದಾರೆ.

ಸದ್ಯಕ್ಕೆ ಪೈಲ್ವಾನ್ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದ್ದು ಆ ನಂತರ ಸುದೀಪ್ ತಾವು ಈಗಾಗಲೇ ಸಹಿ ಮಾಡಿರುವ ತೆಲುಗು, ಕನ್ನಡ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಕೋಟಿಗೊಬ್ಬ-3 ಚಿತ್ರ ಹಾಗೂ ‘ಬಿಲ್ಲ ರಂಗ ಭಾಷ’ ಕನ್ನಡ ಚಿತ್ರಗಳು ಸುದೀಪ್ ಕೈಯಲ್ಲಿವೆ. ಹಾಡುಗಳು ಹಾಗೂ ಟಾಕೀ ಪೋರ್ಶನ್ ಶೂಟಿಂಗ್‌ನಲ್ಲಿ ಪ್ರತ್ಯೇಕವಾಗಿ ಭಾಗವಹಿಸಲಿರುವ ಕಿಚ್ಚ ಸುದೀಪ್ ಈ ಮಧ್ಯೆ ತಮ್ಮ ಮೆಚ್ಚನ ‘ಕ್ರಿಕೆಟ್’ ನಲ್ಲೂ ಭಾಗಿಯಾಗಲಿದ್ದಾರೆ. ಒಟ್ಟಿನಲ್ಲಿ, ಕನ್ನಡ ಕಿಚ್ಚ ಸುದೀಪ್ ತಾವು ಎಲ್ಲೇ ಹೋದರೂ ಕನ್ನಡದ ಕಂಪನ್ನು ಹರಡುವ ಕೆಲಸವನ್ನು ಮಾಡದೇ ಬಿಡುವುದಿಲ್ಲ.

ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರದಲ್ಲಿ ಬಾಲಿವುಡ್ ಹೀರೋಗಳಾದ ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸ್ಟ್ರಾಂಗ್ ಬಾಡಿಯ ಪೈಲ್ವಾನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೈಲ್ವಾನ್ ಚಿತ್ರವು ಕನ್ನಡವೂ ಸೇರಿದಂತೆ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಮರಾಠಿ ಭಾಷೆಗಳಲ್ಲೂ ರಿಲೀಸ್ ಆಗಲಿದೆ.

About the author

ಕನ್ನಡ ಟುಡೆ

Leave a Comment