ಆಹಾರ

ಕರಬೂಜ ಹಣ್ಣಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಅರ್ಧ ಕರಬೂಜ ಹಣ್ಣಿನ ಹೋಳು, ಮೂರು ಟೇಬಲ್ ಚಮಚ ಬೆಲ್ಲ, ಉಪ್ಪು ಮತ್ತು ನಿಂಬೆ ರಸ.

ಮಾಡುವ ವಿಧಾನ: ಸಿಪ್ಪೆ ಮತ್ತು ಬೀಜಗಳನ್ನು ತೆಗೆದ ಅರ್ಧ ಕರಬೂಜ ಹಣ್ಣಿನ ಹೋಳುಗಳನ್ನು ಮಿಕ್ಸಿಗೆ ಹಾಕಿ ಅದಕ್ಕೆ ಮೂರು ಟೇಬಲ್ ಚಮಚ ಬೆಲ್ಲ ಸೇರಿಸಿ ಅರ್ಧಕಪ್‌ ನೀರು ಹಾಕಿ ರುಬ್ಬಿ ಶೋಧಿಸಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸ್ವಲ್ಪ ಒಂದೆರಡು ಕಲ್ಲಂಗಡಿ ಹಣ್ಣಿನ ರಸದ ಕೆಂಪು ಐಸ್ ಕ್ಯೂಬ್‌ಗಳನ್ನು ಸೇರಿಸಿ ಗುಲಾಬಿ ಬಣ್ಣದ ಜ್ಯೂಸ್ ಅನ್ನು ಬಿಸಿಲಿನಿಂದ ಬಂದವರಿಗೆ ನೀಡಿ.

ಮಸಾಲ ಮಜ್ಜಿಗೆ ಮತ್ತು ಭತ್ತದ ಅರಳು: –


ಬೇಕಾಗುವ ಸಾಮಗ್ರಿಗಳು:
 ಒಂದು ಲೋಟ ಗಟ್ಟಿ ಮಜ್ಜಿಗೆ, ಉಪ್ಪು, ಜೀರಿಗೆ ಮತ್ತು ಶುಂಠಿ ಪುಡಿ, ಹಿಂಗು, ಸಾಸಿವೆ, 2 ಒಣಮೆಣಸಿನಕಾಯಿ ತುಂಡು, ಕರಿಬೇವು, ಕೊತ್ತಂಬರಿಸೊಪ್ಪು.

ಮಾಡುವ ವಿಧಾನ: ಒಂದು‌ ದೊಡ್ಡಲೋಟ ಗಟ್ಟಿ ಮಜ್ಜಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಒಂದು ಪಾತ್ರೆಗೆ ಬಗ್ಗಿಸಿ ರುಚಿಗೆ ತಕ್ಕಷ್ಟು ಉಪ್ಪು ಜೀರಿಗೆ ಮತ್ತು ಶುಂಠಿ ಪುಡಿಗಳನ್ನು ಸೇರಿಸಿ ಕಲಕಿ ಒಂದು ಗಾಜಿನ ಲೋಟಕ್ಕೆ ಬಗ್ಗಿಸಿ ಮೇಲಿನಿಂದ ಹಿಂಗು, ಸಾಸಿವೆ, ಒಣಮೆಣಸಿನಕಾಯಿ ತುಂಡುಗಳ ಒಗ್ಗರಣೆ ಹಾಕಿ. ಕರಿಬೇವು ಹೆಚ್ಚಿದ ಕೊತ್ತಂಬರಿಸೊಪ್ಪು ಹಾಕಿ ಪುಡಿ ಮಾಡಿದ ಭತ್ತದ ಅರಳನ್ನು ಮೇಲಿನಿಂದ ಉದುರಿಸಿ. ಕಲ್ಲಂಗಡಿ ಹಣ್ಣಿನ ರಸದಿಂದ ಮಾಡಿರುವ ಐಸ್ ಕ್ಯೂಬ್‌ ಮಜ್ಜಿಗೆಗೆ ಹಾಕಿ ಸವಿಯಿರಿ. ತುಂಬಾ ರುಚಿಯಾಗಿರುತ್ತದೆ.

About the author

ಕನ್ನಡ ಟುಡೆ

Leave a Comment