ಸಿನಿ ಸಮಾಚಾರ

ಕರುನಾಡ ಸಂಭ್ರಮ: ವೇದಿಕೆಯಲ್ಲಿ ಚಿತ್ರರಂಗದ ತಾರಾ ಮೆರುಗು

ಬೆಂಗಳೂರು: 8ನೇ ಆವೃತ್ತಿಯ ಕರುನಾಡ ಸಂಭ್ರಮದಲ್ಲಿ ಸ್ಯಾಂಡಲ್’ವುಡ್’ನ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರು ಪಾಲ್ಗೊಳ್ಳುತ್ತಿದ್ದು, ಈ ಬಾರಿಯ ಕರುನಾಡ ಸಂಭ್ರಮ ಚಿತ್ರರಂಗದ ತಾರಾ ಮೆರುಗಿನೊಂದಿಗೆ ಕಲರ್ಫುಲ್ ಆಗಿರಲಿದೆ.
ಕರುನಾಡ ಸಂಭ್ರಮ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಲಿದ್ದು, ವೇದಿಕೆಯಲ್ಲಿ ಧನಂಜಯ್ ಹಾಗೂ ನಟ ಯಶ್ ಅವರು ಜನರೊಂದಿಗೆ ಮಾತಿನ ನಗೆಚಟಾಕಿ ಹರಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗೀತದ ಕಾರ್ಯಕ್ರಮಗಳೂ ಕೂಡ ನಡೆಯಲಿದ್ದು, ವಿಜಯ್ ಪ್ರಕಾಶ್, ಲತಾ ಹಂಸಲೇಖ, ಮಾಲ್ಗುಡಿ ಶೋಭಾ, ಹರಿಹರನ್ ಅವರು ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ಭಾವನಾ ರಾವ್, ಅಂಕಿತ, ಸೋನು ಗೌಡ, ಮಾನ್ವಿತಾ ಕಾಮತ್, ಆಶಿಕಾ ರಂಗನಾಥ್ ಮತ್ತು ಕಾವ್ಯ ಶಾ ಸೇರಿ ಹಲವು ನಟ-ನಟಿಯರು ಹೆಜ್ಜೆ ಹಾಕಲಿದ್ದಾರೆ.
ಕಾರ್ಯಕ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೆಲುವು ಕನ್ನಡ ಗೆಳೆಯರ ಸಂಘದ ಟ್ರಸ್ಟೀ ಪ್ರಶಾಂತ್ ವೆಂಕಟಪ್ಪ ಅವರು, ಕರುನಾಡ ಸಂಭ್ರಮವನ್ನು ಜಿಕೆಜಿಎಸ್ ಆಯೋಜನೆ ಮಾಡುತ್ತಿದೆ. ಇದೊಂದು ಕನ್ನಡಪರ ಟ್ರಸ್ಟ್ ಆಗಿದೆ. ಕಾರ್ಯಕ್ರಮದ ಮೂಲಕ ಕನ್ನಡ ಹಾಗೂ ಸಂಸ್ಕೃತಿಯನ್ನು ಪಸರಿಸಲು ಯತ್ನಿಸುತ್ತಿದ್ದೇವೆ. ಸರ್ಕಾರಿ ಶಾಲೆ ಹಾಗೂ ಮಕ್ಕಳ ಕಲೆಗಳನ್ನು ಈ ಮೂಲಕ ಪ್ರೋತ್ಸಾಹಿಸುತ್ತಿದ್ದೇವೆಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment