ರಾಷ್ಟ್ರ ಸುದ್ದಿ

ಕರೆನ್ಸಿಮಯ ಕನ್ನಿಕಾ ಪರಮೇಶ್ವರಿ, ಅಲಂಕಾರಕ್ಕೆ 4 ಕೋಟಿ ನಗದು, 2 ಕೋಟಿ ಮೌಲ್ಯದ ಚಿನ್ನಾಭರಣ ಬಳಕೆ!

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಪ್ರಸಿದ್ಧ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಭಕ್ತರು 4 ಕೋಟಿ ರುಪಾಯಿ ನಗದು ಹಾಗೂ 2 ಕೋಟಿ ರುಪಾಯಿ ಮೌಲ್ಯದ 8 ಕೆಜಿ ಚಿನ್ನಾಭರಣಗಳನ್ನು ದೇವಿಯ ಪೂಜೆಗಾಗಿ ನೀಡಿದ್ದಾರೆ.
ನವರಾತ್ರಿ ಪ್ರಯುಕ್ತ 140 ವರ್ಷಗಳಷ್ಟು ಹಳೆಯದಾದ ಕನ್ನಿಕಾ ಪರಮೇಶ್ವರಿಗೆ ಸುಮಾರು 200 ಭಕ್ತರು ನೀಡಿದ ಕೋಟ್ಯಂತರ ರು ಮೌಲ್ಯದ ಚಿನ್ನಾಭರಣಗಳು ಮತ್ತು ಕರೆನ್ಸಿಗಳಿಂದ ಮಹಾ ಮಾತೆಯನ್ನು ಭವ್ಯವಾಗಿ ಅಲಂಕರಿಸಲಾಗಿದೆ.ನದೇವಿಯ ಮುಂದೆ ಹಣ ಮತ್ತು ಚಿನ್ನಾಭರಣವಿಟ್ಟು ಪೂಜೆ ಮಾಡಿಸುವುದರಿಂದ ತಮಗೆ ಅದೃಷ್ಟ ಬರುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ದೇವಿಯ ಅಲಂಕಾರಕ್ಕೆ ನೀಡಿದ ಹಣವೆಲ್ಲ ಸಾರ್ವಜನಿಕರದ್ದು. ಪೂಜೆ ಮುಗಿನ ನಂತರ ಅವರ ಹಣ ಮತ್ತು ಚಿನ್ನಾಭರಣವನ್ನು ವಾಪಸ್ ನೀಡಲಾಗುವುದು ಎಂದು ದೇವಸ್ಥಾನ ಸಮಿತಿಯ ಮುಖ್ಯಸ್ಥ ಕೊಲ್ಲೂರು ವೆಂಕಟೇಶ್ವರ್ ರಾವ್ ಅವರು ಹೇಳಿದ್ದಾರೆ.ದೇವಾಲಯದ ಸಂಪ್ರದಾಯದ ಪ್ರಕಾರ, ಭಕ್ತರು ನೀಡಿದ ನಗದು ಮತ್ತು ಚಿನ್ನಾಭರಣಗಳಿಂದ ಕನ್ನಿಕಾ ಪರಮೇಶ್ವರಿ ದೇವಿಯನ್ನು ಸಿಂಗರಿಸಲಾಗಿದ್ದು, ಗರ್ಭಗುಡಿಯ ನೆಲ ಗೋಡೆಗಳು 2.5 ಕೋಟಿ ರೂ.ಗಳ ದೇಶ-ವಿದೇಶಗಳ ಕರೆನ್ಸಿಗಳಿಂದ ಅತ್ಯಂತ ಆಕರ್ಷಕವಾಗಿ ಅಲಂಕೃತಗೊಂಡಿದೆ.
ಈ ದೇವಾಲಯದಲ್ಲಿ ಪ್ರತಿ ವರ್ಷ ದೇವಿ ನವರಾತ್ರಿ ಉತ್ಸವವನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಚಿನ್ನಾಭರಣಗಳು ಮತ್ತು ಎಲ್ಲ ಮುಖಬೆಲೆಯ ಹೊಸ ನೋಟುಗಳೊಂದಿಗೆ ಅಲಂಕರಿಸಲಾಗುತ್ತದೆ. ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯನ್ನು ಶ್ರೀ ಮಹಾಲಕ್ಷ್ಮೀ ದೇವಿಯ ರೂಪದಲ್ಲೂ ಪೂಜಿಸಿ ಆರಾಧಿಸಲಾಗುತ್ತದೆ. ಭಕ್ತರು ದಾನವಾಗಿ ನೀಡಿದ ಸೀರೆಗಳು, ಚಿನ್ನ-ಬೆಳ್ಳಿ ಒಡವೆಗಳು ಮತ್ತಿತ್ತರ ಉಡುಗೊರೆಗಳನ್ನು ದೇವಿಯ ಅಲಂಕಾರಕ್ಕೆ ಬಳಸಲಾಗುತ್ತದೆ.

About the author

ಕನ್ನಡ ಟುಡೆ

Leave a Comment