ರಾಜ್ಯ ಸುದ್ದಿ

ಕರ್ತವ್ಯಕ್ಕೆ ಹಾಜರಾದ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ

ಬೆಂಗಳೂರು: ಮಾ.7ರಂದು ತೇಜರಾಜ್ ಶರ್ಮಾ ಎಂಬಾತನಿಂದ ಚಾಕು ಇರಿತಕ್ಕೊಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾದರು. 47 ದಿನಗಳ ವಿಶ್ರಾಂತಿಯ ಬಳಿಕ ವಿಶ್ವನಾಥ್​ ಶೆಟ್ಟಿ ಅವರು ಲೋಕಾಯುಕ್ತ ಕಚೇರಿಗೆ ಆಗಮಿಸಿ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಕೊಂಡರು. ಮಾ.7ರ ಮಧ್ಯಾಹ್ನ 1.50ರಲ್ಲಿ ಆರೋಪಿ ತೇಜರಾಜ್ ಶರ್ಮಾ ಲೋಕಾಯುಕ್ತರಿಗೆ ಚಾಕುವಿನಿಂದ ಇರಿದಿದ್ದ. ವಿಶ್ವನಾಥ್​ ಶೆಟ್ಟಿ ಅವರು ಮಲ್ಯ ಆಸ್ಪತ್ರೆಯಲ್ಲಿ 10 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಆ ನಂತರ ಅವರು ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು.

About the author

ಕನ್ನಡ ಟುಡೆ

Leave a Comment