ರಾಷ್ಟ್ರ ಸುದ್ದಿ

ಕರ್ತಾರ್‌ಪುರ್‌ ಕಾರಿಡಾರ್‌ : 4 ಕಿ.ಮೀ. ರಸ್ತೆ ನಿರ್ಮಿಸುವ ಭಾರತ

ಹೊಸದಿಲ್ಲಿ : ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಯೋಜನೆಗೆ ಸಂಬಂಧಿಸಿದಂತೆ ಭಾರತ ಗುರ್‌ದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ ನಿಂದ ಪಾಕಿಸ್ಥಾನಕ್ಕೆ ತಾಗಿಕೊಂಡಿರುವ ಪಂಜಾಬ್‌ ಅಂತಾರಾಷ್ಟ್ರೀಯ ಗಡಿಯ ವರೆಗಿನ ನಾಲ್ಕು ಕಿ.ಮೀ. ರಸ್ತೆಯನ್ನು ನಿರ್ಮಿಸಲಿದೆ.

ದೀರ್ಘ‌ಕಾಲದಿಂದ ಕಾಯಲಾಗುತ್ತಿರುವ ಈ ಕಾರಿಡಾರ್‌ ಪಾಕಿಸ್ಥಾನದ ಕರ್ತಾರ್‌ಪುರ್‌ ನಲ್ಲಿನ ದರ್ಬಾರ್‌ ಸಾಹಿಬ್‌ ಅನ್ನು ಭಾರತದಲ್ಲಿನ ದೇರಾ ಬಾಬಾ ನಾನಕ್‌  ಗುರುದ್ವಾರದೊಂದಿಗೆ ಜೋಡಿಸಲಿದೆ. ಈ ವಿಷಯವನ್ನು ಇಂದು ಕೇಂದ್ರ ಸಹಾಯಕ ಹೆದ್ದಾರಿ ಸಚಿವ ಮನ್‌ಸುಖ್‌ ಎಲ್‌ ಮಾಂಡವೀಯ ಅವರು ಲೋಕಸಭೆಗೆ ಲಿಖೀತ ಉತ್ತರದಲ್ಲಿ ತಿಳಿಸಿದರು.

ಭಾರತದ ಕಡೆಯಿಂದ ಆಗಲಿರುವ ಕಾಮಗಾರಿಗೆ ಕಳೆದ ನ.26ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು  ಮತ್ತು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಶಿಲಾನ್ಯಾಸ ನೇರವೇರಿಸಿದ್ದರು.

 

About the author

ಕನ್ನಡ ಟುಡೆ

Leave a Comment