ರಾಜಕೀಯ

ಕರ್ನಾಟಕದಲ್ಲಿಯೂ ಪ್ರಿಯಾಂಕಾ ಚುನಾವಣಾ ಪ್ರಚಾರ ಖಚಿತ: ರಾಜ್ಯ ಕಾಂಗ್ರೆಸ್ ನಾಯಕರ ಭರವಸೆ

ಬೆಂಗಳೂರು: ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿರುವುದು ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಹೊಸ ಹುರುಪನ್ನು ತಂದಿದೆ. ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆ ವೇಳೆ ಇದು ರಾಜ್ಯದಲ್ಲಿ ಕೈ ಪಕ್ಷದ ಬಲವರ್ಧನೆಗೆ ಸಹ ಕಾರಣವಾಗಲಿದೆ ಎಂದು ಅವರು ಊಹಿಸಿದ್ದಾರೆ.”ಆಕೆ ಅಖಿಲ ಭಾರತ ಮಟ್ಟದ ನಾಯಕಿಯಾಗಿದ್ದಾರೆ. ನಾವು ಅವರನ್ನು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಸಹ ಕರೆತರುತ್ತೇವೆ. ಆಕೆ ಚುನಾವಣಾ ಕ್ಯಾಂಪೇನ್ ಗಳಲ್ಲಿ ಭಾಗವಹಿಸಲಿದ್ದಾರೆ”  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಪ್ರಿಯಾಂಕಾ ಅವರು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಬುಧವಾರ ನೇಮಕಗೊಂಡಿದ್ದರು.”ಪ್ರಿಯಾಂಕಾ ಇದಾಗಲೇ ರಾಹುಲ್ ಪ್ರತಿನಿಧಿಸಿದ ಅಮೇಥಿ ಹಾಗೂ ಸೋನಿಯಾ ಗಾಂಧಿ ಪ್ರತಿನಿಧಿಸಿದ ರಾಯ್ ಬರೇಲಿಯಲಿ ಕಳೆದ 2-3 ಅವಧಿಯಲ್ಲಿ ಪ್ರಚಾರ ನಡೆಸಿದ್ದಾರೆ. ಅವರು ತಳಮಟ್ಟದ ಕೆಲಸದ  ಬಗ್ಗೆ ಸರಿಯಾಗಿ ತಿಳುವಳಿಕೆ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ಹೊಸ ಪೀಳಿಗೆಗೆ ಹೆಚ್ಚಿನ ಅವಕಾಶ ನೀಡಲಿದೆ”ಅವರು ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಸಹ ಪ್ರಿಯಾಂಕಾ ಅವರ ರಾಜಕೀಯ ಪ್ರವೇಶವು ಕರ್ನಾಟಕದಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.”ಇದು ಕರ್ನಾಟಕ ಸೇರಿದಂತೆ ದೇಶದ ಉದ್ದಗಲಕ್ಕೂ ಪಕ್ಷಕ್ಕೆ ಸಹಾಯ ಮಾಡುತ್ತದೆ. ಅವರು ಮತ್ತಷ್ಟು ಕಾಂಗ್ರೆಸ್ ಅನ್ನು ಬಲಪಡಿಸುತ್ತಾರೆ. ಈಗಾಗಲೇ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸುವುದರೊಡನೆ ಕೈ ಪಕ್ಷ ಉತ್ತೇಜಿತವಾಗಿದೆ”
“ನಾನು ಸಂತಸಗೊಂಡಿದ್ದೇನೆ. ಬೆಳಿಗ್ಗೆಯೇ ನಾನು ಉತ್ತರ ಪ್ರದೇಶದಿಂದ ಹಲವು ಕರೆಗಳನ್ನು ಸ್ವೀಕರಿಸಿದ್ದೆ. ಮನಸ್ಥಿತಿ ಬದಲಾಗಿದೆ ಮತ್ತು ಕಾಂಗ್ರೆಸ್ ಪರ ಪ್ರಚಾರ ಮಾಡಲು ಉತ್ತರದಲ್ಲಿ ನಾನೂ ಪಾಲ್ಗೊಳ್ಳುತ್ತಿದ್ದೇನೆ.ಈ ವರ್ಷಗಳಲ್ಲಿ ಪ್ರಿಯಾಂಕಾ ವಿಶೇಷವಾಗಿ ರಾಯ್ ಬರೇಲಿ ಹಾಗೂ ಅಮೇಥಿಯಲ್ಲಿ ಪ್ರಿಯಾಂಕಾ ಸಕ್ರಿಯರಾಗಿದ್ದರು.ಅವರು ಒಳ್ಳೆಯ ಚೆರಿಷ್ಮಾ ಹೊಂದಿದ್ದಾರೆ. “ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಹೇಳಿದ್ದಾರೆ.
ಅಮೇಥಿ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳು ಪೂರ್ವ ಉತ್ತರ ಪ್ರದೇಶದಲ್ಲಿ ಬರಲಿದೆ.ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವಂತೆ ಮಾಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಗಿದೆ.

About the author

ಕನ್ನಡ ಟುಡೆ

Leave a Comment