ಸಿನಿ ಸಮಾಚಾರ

ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಗೆಲ್ಲಲು ‘ಟಗರು’ ಸಿನಿಮಾದ ಸ್ಪೂರ್ತಿ

ಬೆಂಗಳೂರು: ಟಗರು ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೊರೈಸಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಚಿತ್ರತಂಡಕ್ಕೆ ಸಂಭ್ರಮಿಸಲು ಮತ್ತೊಂದು ಸಂತಸದ ಸುದ್ದಿ ಇದ್ದು ವಿಜಯ್ ಹಜಾರೆ ಟ್ರೋಫಿ ಗೆದ್ದಿರುವ ಕ್ರಿಕೆಟ್ ತಂಡದ ಗೆಲುವಿಗೆ ಇದೇ ಸ್ಪೂರ್ತಿಯಾಗಿದೆಯಂತೆ.

ಪಂದ್ಯಕ್ಕೂ ಮುನ್ನ ಕ್ರಿಕೆಟ್ ತಂಡ ಟಗರು ಸಿನಿಮಾ ನೋಡಿದ್ದು ಸ್ವತಃ ಕೋಚ್ ಜಿಕೆ ಅನಿಲ್ ಕುಮಾರ್ ನಿರ್ಮಾಪಕ ಶ್ರೀಕಾಂತ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದರು.  ಜಿಕೆ ಅನಿಲ್ ಕುಮಾರ್ ಪ್ರಕಾರ ಕ್ರಿಕೆಟ್ ತಂಡ ಟಗರು ಸಿನಿಮಾ ನೋಡಿ ಸ್ಪೂರ್ತಿ ಪಡೆದು ಎದುರಾಳಿ ತಂಡಕ್ಕೆ ಉತ್ತಮ ಪೈಪೋಟಿ ನೀಡಿ ಟ್ರೋಫಿ ಗೆದ್ದಿದ್ದಾರೆ. ಕ್ರಿಕೆಟಿಗರಿಗೆ ನಮ್ಮ ಸಿನಿಮಾ ಸ್ಪೂರ್ತಿಯಾಗಿರುವುದು ಸಂತಸದ ವಿಷಯ ಎಂದು ನಿರ್ಮಾಪಕರು ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment