ರಾಷ್ಟ್ರ ಸುದ್ದಿ

ಕರ್ನಾಟಕ ಸೇರಿದಂತೆ 13 ಕಡೆ ಕೇಂದ್ರೀಯ ವಿವಿ ಸ್ಥಾಪನೆ

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ 3,600 ಕೋಟಿ ರೂ.ವೆಚ್ಚದಲ್ಲಿ13 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರೀಯ ವಿವಿ ಕಾಯಿದೆ 2009ರ ಅಡಿಯಲ್ಲಿ ಕರ್ನಾಟಕ, ಕೇರಳ, ತ.ನಾಡು, ಒಡಿಶಾ, ಪಂಜಾಬ್‌, ರಾಜಸ್ಥಾನ, ಜಾರ್ಖಂಡ್‌, ಹಿಮಾಚಲ ಪ್ರದೇಶದಲ್ಲಿ ತಲಾ ಒಂದೊಂದು ಮತ್ತು ಜಮ್ಮು ಕಾಶ್ಮೀರದಲ್ಲಿ ಎರಡು ವಿವಿಗಳು ತಲೆ ಎತ್ತಲಿವೆ.

36 ತಿಂಗಳೊಳಗೆ ಈ ಸಂಬಂಧ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ, ಎಂದು ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಮಾಹಿತಿ ನೀಡಿದ್ದಾರೆ. ಕೇಂದ್ರೀಯ ವಿವಿಗಳ ಸ್ಥಾಪನೆಯಿಂದ, ಉನ್ನತ ಶಿಕ್ಷಣ ಲಭ್ಯತೆ ಮತ್ತಷ್ಟು ಮಂದಿಗೆ ವಿಸ್ತರಣೆಗೊಳ್ಳುವುದಲ್ಲದೆ, ಇತರೆ ವಿವಿಗಳಿಗೆ ಮಾದರಿಯಾಗಿ ಈ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ ಎಂದು ಗೋಯಲ್‌ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment