ರಾಜ್ಯ ಸುದ್ದಿ

ಕಲಬುರ್ಗಿಯಲ್ಲಿ ಭಾರೀ ಮಳೆ: ಅಪಾರ ಬೆಳೆ ನಷ್ಟ ,ರಸ್ತೆಗಳು ಜಲಾವೃತ

ಕಲಬುರಗಿ: ಜಿಲ್ಲೆಯ ಹಲವೆಡೆ  ಗುರುವಾರ ರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು  ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರು ಸಂಕಷ್ಟ ಕ್ಕೀಡಾಗಿದ್ದಾರೆ.

ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತುಕೊಂಡು ವಾಹನ ಸವಾರರು ಪರದಾಡಬೇಕಾಗಿದೆ. ತೊಗರಿ ಬೆಳೆ  ಕಟಾವು ಮಾಡಿಟ್ಟಿದ್ದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ  ಇನ್ನೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.

 

About the author

ಕನ್ನಡ ಟುಡೆ

Leave a Comment