ರಾಷ್ಟ್ರ ಸುದ್ದಿ

ಕಲಬುರ್ಗಿ ಹತ್ಯೆ : ತನಿಖೆ ಮಾಡಿ, ಕಾಲಹರಣ ಬಿಡಿ; ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್‌ ಚಾಟಿ

ಹೊಸದಿಲ್ಲಿ: ಖ್ಯಾತ ಸಂಶೋಧಕ ಪ್ರೊ. ಎಂ.ಎಂ.ಕಲಬುರ್ಗಿ ಹತ್ಯೆ ತನಿಖೆ ನಿಧಾನಗತಿಯಲ್ಲಿ ನಡೆದಿರುವ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ತನಿಖೆಯನ್ನು ಮುಗಿಸಲು ನಿಮಗೆ ಇನ್ನೂ ಎಷ್ಟು ಸಮಯ ಬೇಕು ಎಂಬುದನ್ನು ಎರಡು ವಾರದೊಳಗೆ ತಿಳಿಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ರಾಜ್ಯದ ಸಿಐಡಿ ನಡೆಸಿರುವ ತನಿಖೆಯಲ್ಲಿ ವಿಳಂಬ ಆಗುತ್ತಿದೆ. ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ವಿಶೇಷ ತನಿಖಾ ದಳ ರಚಿಸಿ ಪ್ರಕರಣದ ತನಿಖೆಯನ್ನು ನಡೆಸುವಂತೆ ಸೂಚನೆ ನೀಡುವಂತೆ ಪ್ರೊ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕೋರಿದ್ದರು.

ನ್ಯಾಯಮೂರ್ತಿಗಳಾದ ರೋಹಿಂಗ್ಟನ್‌ ನಾರಿಮನ್‌ ಮತ್ತು ನವೀನ್‌ ಸಿನ್ಹಾ ಅವರಿದ್ದ ದ್ವಿಸದಸ್ಯ ಪೀಠವು ಸೋಮವಾರ ಈ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿ, ರಾಜ್ಯ ಸರಕಾರದ ನಿಧಾನಗತಿಯ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘‘ತನಿಖೆಗೆ ಬೇಕಿರುವ ಸಮಯದ ಮಾಹಿತಿಯನ್ನು ಎರಡು ವಾರದೊಳಗೆ ಸ್ಪಷ್ಟವಾಗಿ ತಿಳಿಸದಿದ್ದರೆ ಸೂಕ್ತ ಆದೇಶ ನೀಡಬೇಕಾಗುತ್ತದೆ,’’ ಎಂದೂ ಎಚ್ಚರಿಕೆ ನೀಡಿತು.

‘‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಏನೂ ಮಾಡುತ್ತಿಲ್ಲ. ಕಾಲಹರಣ ಮಾಡುವ ಮೂಲಕ ಎಲ್ಲರನ್ನೂ ಮೂರ್ಖರನ್ನಾಗಿ ಮಾಡುವುದನ್ನು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ,’’ ಎಂದು ರಾಜ್ಯ ಸರಕಾರದ ವಿರುದ್ಧ ಚಾಟಿ ಬೀಸಿದ ನ್ಯಾ. ರೋಹಿಂಗ್ಟನ್‌ ನಾರಿಮನ್‌ ‘‘ತನಿಖೆಯ ಪ್ರಗತಿಯ ಕುರಿತಂತೆ ನಿಮ್ಮಿಂದ ಸಮಾಧಾನಕರ ಪ್ರತಿಕ್ರಿಯೆ ಬರದೇ ಇದ್ದರೆ ಪ್ರಕರಣವನ್ನು ಬೇರೆ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕಾಗುತ್ತದೆ,’’ ಎಂದೂ ಎಚ್ಚರಿಸಿದರು. 2015ರ ಆಗಸ್ಟ್‌ 30ರಂದು ಪ್ರೊ. ಕಲಬುರ್ಗಿ ಅವರು ಧಾರವಾಡದ ತಮ್ಮ ನಿವಾಸದಲ್ಲಿದ್ದಾಗ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ನ್ಯಾಯಮೂರ್ತಿಗಳಾದ ರೋಹಿಂಗ್ಟನ್‌ ನಾರಿಮನ್‌ ಮತ್ತು ನವೀನ್‌ ಸಿನ್ಹಾ ಅವರಿದ್ದ ದ್ವಿಸದಸ್ಯ ಪೀಠವು ಸೋಮವಾರ ಈ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿ, ರಾಜ್ಯ ಸರಕಾರದ ನಿಧಾನಗತಿಯ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘‘ತನಿಖೆಗೆ ಬೇಕಿರುವ ಸಮಯದ ಮಾಹಿತಿಯನ್ನು ಎರಡು ವಾರದೊಳಗೆ ಸ್ಪಷ್ಟವಾಗಿ ತಿಳಿಸದಿದ್ದರೆ ಸೂಕ್ತ ಆದೇಶ ನೀಡಬೇಕಾಗುತ್ತದೆ,’’ ಎಂದೂ ಎಚ್ಚರಿಕೆ ನೀಡಿತು.

‘‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಏನೂ ಮಾಡುತ್ತಿಲ್ಲ. ಕಾಲಹರಣ ಮಾಡುವ ಮೂಲಕ ಎಲ್ಲರನ್ನೂ ಮೂರ್ಖರನ್ನಾಗಿ ಮಾಡುವುದನ್ನು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ,’’ ಎಂದು ರಾಜ್ಯ ಸರಕಾರದ ವಿರುದ್ಧ ಚಾಟಿ ಬೀಸಿದ ನ್ಯಾ. ರೋಹಿಂಗ್ಟನ್‌ ನಾರಿಮನ್‌ ‘‘ತನಿಖೆಯ ಪ್ರಗತಿಯ ಕುರಿತಂತೆ ನಿಮ್ಮಿಂದ ಸಮಾಧಾನಕರ ಪ್ರತಿಕ್ರಿಯೆ ಬರದೇ ಇದ್ದರೆ ಪ್ರಕರಣವನ್ನು ಬೇರೆ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕಾಗುತ್ತದೆ,’’ ಎಂದೂ ಎಚ್ಚರಿಸಿದರು. 2015ರ ಆಗಸ್ಟ್‌ 30ರಂದು ಪ್ರೊ. ಕಲಬುರ್ಗಿ ಅವರು ಧಾರವಾಡದ ತಮ್ಮ ನಿವಾಸದಲ್ಲಿದ್ದಾಗ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

About the author

ಕನ್ನಡ ಟುಡೆ

Leave a Comment