ರಾಷ್ಟ್ರ

ಕಲ್ಲಿದ್ದಲು ಪೂರೈಕೆ ಸ್ಥಗಿತಗೊಳಿಸಲಿರುವ ಕೇಂದ್ರ ಸರ್ಕಾರ

ಬೆಂಗಳೂರು: ಬಳ್ಳಾರಿ ಮತ್ತು ಯರಮಸ್‌ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಬ್ರಿಜ್‌ ಲಿಂಕಿಂಗ್‌ ಮೂಲಕ ಕಲ್ಲಿದ್ದಲು ಪೂರೈಸುವುದನ್ನು ಮೇ 31 ರಿಂದ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಶಕ್ತಿ ಸ್ಕೀಮ್‌ನಡಿ ಹೊಸ ಅರ್ಜಿ ಹಾಕಿಕೊಳ್ಳುವಂತೆಯೂ ಕೇಂದ್ರ ಸೂಚಿಸಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು ”ರಾಜ್ಯಕ್ಕೆ ಅಗತ್ಯ ಕಲ್ಲಿದ್ದಲು ನೀಡುವಂತೆ ಕೋರಿ ಕೇಂದ್ರದ ಕಲ್ಲಿದ್ದಲು ಖಾತೆ ಸಚಿವ ಪಿಯೂಶ್‌ ಗೋಯಲ್‌ ಅವರನ್ನು ಕಳೆದ ವಾರ ದಿಲ್ಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಇದರ ಮಧ್ಯೆಯೇ ಕಲ್ಲಿದ್ದಲು ಸರಬರಾಜು ನಿಲ್ಲಿಸುತ್ತಿರುವ ಬಗ್ಗೆ ಕೇಂದ್ರದಿಂದ ರಾಜ್ಯಕ್ಕೆ ಪತ್ರ ಬಂದಿದೆ” ಎಂದರು.

ಬಿಟಿಪಿಎಸ್‌-2 “800 ಮೆಗಾ ವ್ಯಾಟ್‌” ವೈಟಿಪಿಎಸ್‌ಗೆ ಒಪ್ಪಂದದ ಅನ್ವಯ ಕೇಂದ್ರ ಸರಕಾರ ಕಲ್ಲಿದ್ದಲು ಒದಗಿಸಬೇಕಿದೆ. ಈ ಬಗ್ಗೆ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಜತೆಗೆ 10 ಲಕ್ಷ ಮೆಟ್ರಿಕ್‌ ಟನ್‌ ವಿದೇಶಿ ಕಲ್ಲಿದ್ದಲು ತರಿಸಿಕೊಳ್ಳುವುದಕ್ಕೂ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ  ಎಂದು ಡಿ.ಕೆ. ಹೇಳಿದರು.

 

About the author

ಕನ್ನಡ ಟುಡೆ

Leave a Comment