ರಾಷ್ಟ್ರ ಸುದ್ದಿ

ಕಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತ ಮತ್ತು ಇತರರು ಅಪರಾಧಿಗಳು: ದೆಹಲಿ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗೆ ಸಂಬಂಧಪಟ್ಟಂತೆ ಕೇಳಿಬರುತ್ತಿರುವ ಕಲ್ಲಿದ್ದಲು ಹಗರಣದಲ್ಲಿ ದೆಹಲಿ ನ್ಯಾಯಾಲಯ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತ ಅವರನ್ನು ತಪ್ಪಿತಸ್ಥ ಎಂದು ಸಾಬೀತುಪಡಿಸಿದೆ. ಗುಪ್ತ ಅವರ ಜೊತೆಗೆ ವಿಕಾಶ್ ಮೆಟಲ್ಸ್ ಅಂಡ್ ಪವರ್ ಲಿಮಿಟೆಡ್(ವಿಎಂಪಿಎಲ್) ನ ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಶರ್, ಕಲ್ಲಿದ್ದಲು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕೆ ಎಸ್ ಕ್ರೊಫ, ಕಲ್ಲಿದ್ದಲು ಸಚಿವಾಲಯದ ಮಾಜಿ ನಿರ್ದೇಶಕ ಕೆ ಸಿ ಸಮ್ರಿಯಾ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಕಾಶ್ ಪಟ್ನಿ ಮತ್ತು ಅದರ ಅಧಿಕೃತ ಸಹಿಗಾರ ಆನಂದ್ ಮಲಿಕ್ ಅವರನ್ನು ಕೂಡ ಅಪರಾಧಿಗಳೆಂದು ನ್ಯಾಯಾಲಯ ಸಾಬೀತುಪಡಿಸಿದೆ.

ಪಶ್ಚಿಮ ಬಂಗಾಳದಿಂದ ವಿಎಂಪಿಎಲ್ ಗೆ ಮೊಯಿರಾ ಮತ್ತು ಮಧುಜೂರ್(ಉತ್ತರ ಮತ್ತು ದಕ್ಷಿಣ) ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅಕ್ರಮ ವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟ ಪ್ರಕರಣವಾಗಿದ್ದು ಸಿಬಿಐ 2012ರಲ್ಲಿ ಎಫ್ಐಆರ್ ದಾಖಲಿಸಿತ್ತು. ಅಪರಾಧಿಗಳೆಂದು ನ್ಯಾಯಾಲಯ ಘೋಷಣೆ ಮಾಡಿದ ನಂತರ ಎಲ್ಲಾ 5 ಜನ ಆರೋಪಿಗಳನ್ನು ನ್ಯಾಯಾಲಯ ಕಸ್ಟಡಿಗೊಪ್ಪಿಸಿದ್ದು ಅವರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಮತ್ತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಿದೆ.ಆರೋಪಿಗಳಿಗೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆಯಾಗುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 2016ರ ಆಗಸ್ಟ್ 19ರಂದು ನ್ಯಾಯಾಲಯ ಗುಪ್ತ ಮತ್ತು ಮತ್ತಿಬ್ಬರು ಸರ್ಕಾರಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ಧ ವಂಚನೆ ಮತ್ತು ಪಿತೂರಿ ಆರೋಪ ಹೊರಿಸಲಾಗಿತ್ತು. ಈ ಎಲ್ಲಾ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

About the author

ಕನ್ನಡ ಟುಡೆ

Leave a Comment