ರಾಜ್ಯ ಸುದ್ದಿ

ಕಲ್ಲು ಕ್ವಾರಿ ಮಾಲೀಕರ ಹೋರಾಟ, ಸದನದಲ್ಲಿ ಧ್ವನಿ ಎತ್ತಿದ ಬಿಎಸ್.ಯಡಿಯೂರಪ್ಪ​

ಬೆಳಗಾವಿ: ಕ್ರಷರ್ ಸಿ ಫಾಮ್ರ್ ಅನ್ನು 20 ವರ್ಷಗಳ ಅವಧಿಗೆ ವಿಸ್ತರಣೆ ಮಾಡಬೇಕು. ಕಟ್ಟಡ ನಿರ್ವಣಕ್ಕೆ ಬಳಸುವ ಕಲ್ಲನ್ನು ಮೈನರ್ ಮಿನರಲ್ಸ್ ವ್ಯಾಪ್ತಿಯಿಂದ ತೆಗೆದು ಅಗತ್ಯ ವಸ್ತುಗಳ ವ್ಯಾಪ್ತಿಗೆ ತರಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ತಲೆ ಮೇಲೆ ಜಲ್ಲಿಕಲ್ಲು ತುಂಬಿದ ಬುಟ್ಟಿ ಇಟ್ಟುಕೊಂಡು ಕೊಂಡಸಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಬಿಎಸ್​ವೈ. ರಾಜ್ಯದಲ್ಲಿ ಜಲ್ಲಿಕಲ್ಲು ಮತ್ತು ಮರಳು ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಲಾಗುವುದು ಎಂದರು. ಬಳಿಕ ಸದನದಲ್ಲಿ ಯಡಿಯೂರಪ್ಪ ಈ ವಿಷಯ ಪ್ರಸ್ತಾಪಿಸಿದರು. ಸ್ಪೀಕರ್ ಕೂಡ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಆಗ ಯಡಿಯೂರಪ್ಪ ಅರಣ್ಯ ಇಲಾಖೆ ನೀತಿಯಿಂದಾಗಿ ಜಲ್ಲಿ ಕ್ರಷರ್ ಮತ್ತು ಕ್ವಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಗಮನಸೆಳೆದರು.

ಸಚಿವರ ಆಶ್ವಾಸನೆ: ಪ್ರತಿಭಟನಾ ಸ್ಥಳಕ್ಕೆ ಬಂದ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ್, ನಿಮ್ಮ ಸಮಸ್ಯೆ ಗಮನಕ್ಕೆ ಬಂದಿದೆ. ಸದನದಲ್ಲಿ ಈ ವಿಷಯ ಚರ್ಚೆ ಮಾಡುತ್ತೇನೆ. ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದರು.

About the author

ಕನ್ನಡ ಟುಡೆ

Leave a Comment