ರಾಷ್ಟ್ರ ಸುದ್ದಿ

ಕಳಪೆ ಗುಣಮಟ್ಟ ಪ್ರಶ್ನಿಸಿದ ಮುಖಂಡರಿಗೆ ಎಇಇ ಆವಾಜ್

 

ರಾಯಚೂರು: ದೊಂಗಾ ರಾಂಪುರ ಮುಖ್ಯರಸ್ತೆ ಪಲಕಂದೊಡ್ಡಿ ವಯಾ-ಗಣಮೂರು ಕ್ರಾಸ್ ವರೆಗಿನ ಮೂರು ಕೋಟಿ ವೆಚ್ಚದಡಿ ಕೈಗೆತ್ತಿಕೊಂಡ ಸಿಸಿ ರಸ್ತೆ ಕಾಮಗಾರಿ ಆರಂಭದಲ್ಲೇ ಕಳಪೆ ನಿರ್ವಹಣೆ ಕುರಿತು ಪ್ರಶ್ನಿಸಿದ ತಾ,ಪಂ ಅಧ್ಯಕ್ಷೆ ಪತಿ, ಹಾಲಿ ಬಿಜೆಪಿ ಮುಖಂಡರಿಗೆ ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರೇ ಆವಾಜ್ ಹಾಕಿದ ಅಂಶ ಬೆಳಕಿಗೆ ಬಂದಿದೆ.

ಹಲವು ವರ್ಷಗಳಿಂದಲೂ ಸಮರ್ಪಕ ರಸ್ತೆಯನ್ನೇ ಕಾಣದೆ, ಮೃತ್ಯೂಕೂಪಕ್ಕೆ ಆಸ್ಪಾದಿಸುವ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸವಾರರ ಸಂಚಕಾರ ಅವ್ಯವಸ್ಥೆ ಮನಗಂಡ ಜಿ,ಪಂ ಆಢಳಿತ ಗ್ರಾಮಾಂತರ ಶಾಸಕರ ಪ್ರದೇಶಾಭಿವೃಧ್ದಿ ಮಂಡಳಿಯ ಮೂರು ಕೋಟಿ ವಿಶೇಷ ಅನುದಾನದಡಿ ಪಲಕಂದೊಡ್ಡಿ- ಗಣಮೂರು ಗ್ರಾಮವರೆಗಿನ ನೂತನ ಸಿಸಿ ರಸ್ತೆಗೆ ಇತ್ತೀಚಿಗಷ್ಢೆ ಶಾಸಕ ತಿಪ್ಪರಾಜು ಹವಾಲ್ದಾರರು ಭೂಮಿಪೂಜೆ ನೆರವೇರಿಸಿದ್ದರು.

ಉದ್ದೇಶಿತ ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಬಳ್ಳಾರಿ ಮೂಲದ ಗುತ್ತೇದಾರ , ಅಂದಾಜು ಪಟ್ಟಿ ನಿಯಮಾವಳಿ ಸ್ಪಷ್ಠ ಗಾಳಿಗೆ ದೂರಿ ಹದಗೆಟ್ಟರಸ್ತಯನ್ನೇ ಮೆಟಲ್ ಮಾಡಿ ಈ ಕುರಿತು ಪ್ರಶ್ನಿಸುವ ಸ್ಥಳೀಯರ ವಿರುಧ್ದವೇ ದಬ್ಬಾಳಿಕೆ ಮುಂದುವರೆಸಿದ್ದರೂ, ಈ ಬಗ್ಗೆ ಪರಿಶೀಲನೆಗೆ ಎಚ್ಚೆತ್ತುಕೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಎಇಇ ಮುಖಂಡರಿಗೆ ಆವಾಸ್ ಹಾಕುವ ದರ್ಪ ತೋರುತ್ತಿರುವುದು ಮೇಲಾಡಳಿತವನ್ನೇ ನಾಚಿಸುವಂತೆ ಮಾಡಿದೆ.

ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ಸಿಸಿ ರಸ್ತೆ ಆರಂಭದಲ್ಲಿಯೇ ಸಂಪೂರ್ಣ ಕಳಪೆ ಮೇಲ್ಣೋಟಕ್ಕೆ ನಿಶ್ಚಿತಗೊಂಡಿದ್ದರೂ, ಲೋಕೋಪಯೋಗಿ ಇಲಾಖೆ ಮಾತ್ರ ಸ್ಥಳ ಪರಿಶೀಲನೆಗೆ ಮೀನಾಮೇಷವೆನಿಸುತ್ತಿರುವ ಅಂಶ ಗ್ರಾಮೀಣರನ್ನು ಕೆರಳಿಸಿದೆ.
ಈ ಹಿಂದಿನ ರಸ್ತೆಯನ್ನೇ ಅಗೆದು ಸಮತಟ್ಟು ಮಾಡುವಲ್ಲಿ ನಿರತರಾಗಿ ಅನುದಾನ ದುರ್ಬಳಕೆಗೆ ಸ್ವತಃ ತಮ್ಮ ಇಲಾಖೆ ಇಂಜಿನಿಯರ್ ,ಗುತ್ತೇದಾರರು ಕಾರಣರಾಗಿದ್ದರು ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕಾಧಿಕಾರಿ ಸ್ಥಳ ಪರಿಶೀಲನೆಗೆ ಮೀನಾಮೇಷವೆನಿಸಿ ಗುತ್ತೇದಾರ ಪರ ವಕಾಲತ್ತು ವಹಿಸಿರುವುದು ಗ್ರಾಮಸ್ಥರ ಕಣ್ಣು ಕೆಂಪಾಗುವಂತೆ ಮಾಡಿದೆ.
ನೂತನ ರಸ್ತೆ ನಿರ್ಮಾಣಕ್ಕೆ ಕಡ್ಡಾಯ ಕಂಕರ್ ಮಿಶ್ರಣ ಮಾಡಬೇಕೆನ್ನುವುದು ನಿಯಮ .ಈ ಷರತ್ತು ಕೇವಲ ಕಸದ ಬುಟ್ಟಿಗೆ ಎನ್ನುವಂತೆ ಗುತ್ತೇದಾರ ಮಾತ್ರ ಸರ್ವಾಧಿಕಾರ ದರ್ಪ ತೋರಿ ನೂತನ ರಸ್ತೆಗೆ ಕಂಕರ್ ಮಿಶ್ರಣ ಮಾಡದೇ ಬೇಕಾಬಿಟ್ಟಿ ಮರಂ ಹಾಕಿ ಕಾಮಗಾರಿ ತೀರಾ ಕಳಪೆ ಮೇಲ್ಣೋಟಕ್ಕೆ ಸಾಬೀತುಗೊಂಡಿದ್ದರೂ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮಕ್ಕೂ ಜಾಗೃತವಹಿಸದ ಲೋಕೋಪಯೋಗಿ ಇಲಾಖಾಧಿಕಾರಿಗಳ ನಡೆ ಸ್ಥ ಕನಿಷ್ಠ ನೋಟೀಸ್ ಜಾರಿಗೂ ಒತ್ತಡವೇರದಿರುವುದು ಗಮನಾರ್ಹವಾಗಿದ್ದು ,ಜಿಲ್ಲಾಢಳಿತ ಇನ್ನಾದರೂ ಜಾಗೃತವಹಿಸಿ ಅಸಮರ್ಪಕ ಕಾಮಗಾರಿಗೆ ಕಾರಣರಾಗಿರುವವರ ವಿರುದ್ದ ಸೂಕ್ತ ಕ್ರಮ ವಹಿಸಬೇಕೆನ್ನುವ ಅಳಲು ಗ್ರಾಮೀಣರಿಂದ ವ್ಯಕ್ತಗೊಂಡಿದೆ.

About the author

ಕನ್ನಡ ಟುಡೆ

Leave a Comment