ರಾಜಕೀಯ

ಕಾಂಗ್ರೆಸ್​ಗಾಗಲಿ, ರಾಹುಲ್​ಗಾಗಲಿ ನಾನು ಗುಲಾಮ ಅಲ್ಲ: ಕುಮಾರಸ್ವಾಮಿ.

ಮಂಡ್ಯ: ಕಾಂಗ್ರೆಸ್​ಗಾಗಲಿ, ರಾಹುಲ್​ಗಾಗಲಿ ನಾನು ಗುಲಾಮ ಅಲ್ಲ. ನಾನು 6.5ಕೋಟಿ ಕನ್ನಡಿಗರ ಗುಲಾಮ ಎಂದು ಕಾಂಗ್ರೆಸ್​ ವಿರುದ್ಧ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಮಂಡ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ನಿಲುವು ಪ್ರಶ್ನಿಸುವ ಅಧಿಕಾರ ಇರುವುದು ಕನ್ನಡಿಗರಿಗೆ ಮಾತ್ರ. ಜೆಡಿಎಸ್ ಸಿದ್ಧಾಂತದ ಬಗ್ಗೆ ಪ್ರಶ್ನಿಸಲು ರಾಹುಲ್ ಗಾಂಧಿ ಯಾರು? ಅವರಿಗೆ ಕರ್ನಾಟಕದ ಚಿತ್ರಣವೇ ಗೊತ್ತಿಲ್ಲ. ರಾಹುಲ್ ನನಗೆ ಲೆಕ್ಕಕ್ಕಿಲ್ಲ ಎಂದು ಹೇಳಿದರು.

2010ರಲ್ಲಿ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ವಜಾಗೊಳಿಸಲು ರಾಜ್ಯಪಾಲರು ಶಿಫಾರಸು ಮಾಡಿದ್ದರು. ರಾಜ್ಯದಲ್ಲಿ ಎರಡನೇ ಬಾರಿಗೆ ಬಿಜೆಪಿ ಉಳಿಸಿದ್ದು ಕಾಂಗ್ರೆಸ್ ಪಕ್ಷ. ಈಗ ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಅನ್ನುತ್ತಾರೆ. ಮೊದಲು ರಾಜ್ಯದ ಇತಿಹಾಸ ತಿಳಿದುಕೊಂಡು ಮಾತನಾಡಲಿ ಎಂದು ಕಿಡಿಕಾರಿದರು.

ಜೆಡಿಎಸ್ ಅವಕಾಶವಾದಿ ಹೇಳಿಕೆ ವಿಚಾರ ಅವಕಾಶವಾದ ರಾಜಕಾರಣ ಮಾಡುವುದು ಸಿದ್ದರಾಮಯ್ಯ, ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಕಾಲು ಹಿಡಿದುಕೊಂಡವರು ಯಾರು? ಬಿಬಿಎಂಪಿ ಅಧಿಕಾರಾಕ್ಕಾಗಿ ಯಾರು ಯಾರ ಮನೆಗೆ ಬಂದಿದ್ದರು? ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.

Facebook

About the author

ಕನ್ನಡ ಟುಡೆ

Leave a Comment