ರಾಷ್ಟ್ರ

ಕಾಂಗ್ರೆಸ್​ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ ಸುಷ್ಮಾ ಸ್ವರಾಜ್​

ನವದೆಹಲಿ : ಕಾಂಗ್ರೆಸ್​ ಪಕ್ಷ ತಮ್ಮ ವಿರುದ್ಧವಾಗಿ ಹಾಕಿದ್ದ ಟ್ವೀಟ್​ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ರೀಟ್ವೀಟ್​ ಮಾಡಿದ್ದಾರೆ.

ಇರಾಕ್​ನಲ್ಲಿ 37 ಭಾರತೀಯರು ಮೃತಪಟ್ಟ ಘಟನೆ ವಿದೇಶಾಂಗ ಸಚಿವರಾಗಿ ಸುಷ್ಮಾ ಸ್ವರಾಜ್​ ಅವರ ಅತಿ ದೊಡ್ಡ ಸೋಲೇ ಎಂದು ಕಾಂಗ್ರೆಸ್​ ಟ್ವಿಟರ್​ನಲ್ಲಿ ಪ್ರಶ್ನೆ ಕೇಳಿತ್ತು. ಈ ಟ್ವೀಟ್​ ಅನ್ನು ಸುಷ್ಮಾ ಸ್ವರಾಜ್​ ರೀಟ್ವಿಟ್​ ಮಾಡಿದ್ದರು ಕಾಂಗ್ರೆಸ್​ ಹಾಕಿದ್ದ ಟ್ವೀಟ್​ನಲ್ಲಿ ಸುಮಾರು 34 ಸಾವಿರ ಜನರು ಮತ ಚಲಾಯಿಸಿದ್ದಾರೆ. ಅದರಲ್ಲಿ ಸುಮಾರು 76% ಜನರು ಇಲ್ಲ ಎಂದು ಉತ್ತರಿಸಿದ್ದು, ಸುಷ್ಮಾ ಸ್ವರಾಜ್​ ಅವರಿಗೆ ಬೆಂಬ ಸೂಚಿಸಿದ್ದಾರೆ. ಕೇವಲ 24% ಜನರು ಮಾತ್ರ ಸುಷ್ಮಾ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸೋತಿದ್ದಾರೆ ಎಂದು ಮತ ಚಲಾಯಿಸಿದ್ದಾರೆ.

About the author

ಕನ್ನಡ ಟುಡೆ

Leave a Comment