ರಾಜಕೀಯ

ಕಾಂಗ್ರೆಸ್‌ ಗುರಿ ಹಸಿವು ಮುಕ್ತ ಕರ್ನಾಟಕ ಆದರೆ ಬಿಜೆಪಿ ಗುರಿ ಕಾಂಗ್ರೆಸ್ ಮುಕ್ತ ಕರ್ನಾಟಕ

ಶಿವಮೊಗ್ಗ: ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣವೇ ಮುಖ್ಯ ಗುರಿ ಎಂಬುದು ಬಿಜೆಪಿಯ ಘೋಷಣೆಯಾಗಿದ್ದರೆ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಕಾಂಗ್ರೆಸ್‌ನ ಮುಖ್ಯ ಗುರಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪರ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಬಿಪಿಎಲ್‌ ಪಡಿತರದಾರರಿಗೆ ಅನ್ನಭಾಗ್ಯ ಜಾರಿ ಮಾಡಿದ್ದು, ಹಸಿವು ಮುಕ್ತ ಕರ್ನಾಟಕ ನಿರ್ಮಾಣವೇ ಕಾಂಗ್ರೆಸ್‌ನ ಗುರಿಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸರ್ವರಿಗೂ ಪಡಿತರ ಹಕ್ಕು ಕಲ್ಪಿಸಬೇಕು ಎಂಬ ಉದ್ದೇಶದಿಂದ ಪಡಿತರ ವ್ಯವಸ್ಥೆಯ ಮಾನದಂಡಗಳನ್ನು ಸಡಿಲಗೊಳಿಸಿ ಕೇವಲ ಅಧಾರ್‌ ಕಾರ್ಡ್‌ ಆಧಾರದ ಮೇಲೆ ಪಡಿತರ ಚೀಟಿ ನೀಡಲು ವ್ಯವಸ್ಥೆ ಜಾರಿಮಾಡಿದೆ. ಎಪಿಎಲ್‌,ಬಿಪಿಎಲ್‌ ಕಾರ್ಡುದಾರರ ನಡುವಿನ ತಾರತಮ್ಯ ನಿವಾರಿಸಲು ಮಾನದಂಡಗಳನ್ನು ಪುನರ್‌ ರೂಪಿಸಲಾಗಿದ್ದು, 1.20ಲಕ್ಷ ರೂ. ಆದಾಯಕ್ಕಿಂತ ಕಡಿಮೆ ಇರುವವರು ಬಿಪಿಎಲ್‌ ವ್ಯಾಪ್ತಿಗೆ ಹಾಗೂ ಅದಕ್ಕಿಂತ ಹೆಚ್ಚು ಆದಾಯ ಹೊಂದಿರುವ, 7 ಎಕರೆ ಜಮೀನು ಹೊಂದಿದ್ದರೆ ಸ್ವಂತ ಕಾರು, ಸರಕಾರಿ ನೌಕರಿ ಇದ್ದರೆ ಅವರು ಎಪಿಎಲ್‌ ವ್ಯಾಪ್ತಿ ಬರುತ್ತಾರೆ ಎಂದರು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ 10 ದಿನದೊಳಗೆ ಅರ್ಜಿದಾರನ ಮನೆ ವಿಳಾಸಕ್ಕೆ ಕಾರ್ಡು ತಲುಪಲಿದೆ. ಬಯೋಮೆಟ್ರಿಕ್‌ ವಿಧಾನದಿಂದ ಎಲ್ಲರೂ ಪಡಿತರ ಪಡೆಯಲು ವಿಧಾನ ರೂಪಿಸಲಾಗಿದ್ದು, ಪಡಿತರ ಚೀಟಿ ಹೊಂದಿರುವವರು ರಾಜ್ಯದ ಯಾವುದೇ ಮೂಲೆಯ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ನಕಲಿ ಕಾರ್ಡುದಾರರ ಮತ್ತು ಅಕ್ರಮ ದಾಸ್ತಾನು ಮಾಡುವವರ ಬಗ್ಗೆ ಮಾಹಿತಿ ನೀಡುವವರಿಗೆ ಒಂದು ಕಾರ್ಡ್‌ಗೆ 400 ರೂ. ಬಹುಮಾನ ನೀಡಲಾಗುವುದು ಎಂದರು.ಬಿಜೆಪಿ ಸಚಿವರಾದ ಯು.ಟಿ.ಖಾದರ್‌ ಹಾಗೂ ರಮಾನಾಥ ರೈ ಭಯೋತ್ಪಾದಕರಿದ್ದಂತೆ ಎಂದು ಬಿಜೆಪಿ ಪದಾಧಿಕಾರಿ ರವಿಕುಮಾರ್‌ ಎಂಬುವರು ಹೇಳಿಕೆ ನೀಡಿದ್ದಾರೆ.

 

About the author

ಕನ್ನಡ ಟುಡೆ

Leave a Comment