ರಾಜಕೀಯ

ಕಾಂಗ್ರೆಸ್‌ ಗೆದ್ದರೆ ಕಿತ್ತೂರು ಚನ್ನಮ್ಮನಿಗೇ ಅಪಮಾನ ಅನಂತ್ ಕುಮಾರ ಹೆಗಡೆ

ಬೆಳಗಾವಿ: ಕಾಂಗ್ರೆಸ್‌ ಪಕ್ಷ ಕಿತ್ತೂರಿನಲ್ಲಿ ಗೆದ್ದರೆ ಅದು ರಾಣಿ ಚನ್ನಮ್ಮನಿಗೆ ಮಾಡುವ ಅವಮಾನ ಎಂದು ಕೇಂದ್ರದ ಕೌಶಲ ಅಭಿವೃದ್ಧಿ ಸಚಿವ ಅನಂತ್‌ಕುಮಾರ ಹೆಗಡೆ ಹೇಳಿದ್ದಾರೆ. ಬೆಳಗಾವಿ ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡ ಬಿಜೆಪಿ ನವಶಕ್ತಿ ಸಮಾವೇಶ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 70 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ ಸರಕಾರದ ಪಾಪದ ಕೊಡ ತುಂಬಿ ಅವರು ಮನೆಗೆ ಹೋಗುವ ಕಾಲ ಬಂದಿದೆ. ನಮ್ಮ ದೇಶ ಕಾಂಗ್ರೆಸ್‌ ಮುಕ್ತವಾಗಬೇಕಾದರೆ ಮೊದಲು ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗಬೇಕು. ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗಬೇಕಾದರೆ ಮೊದಲು ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪತನವಾಗಬೇಕು” ಎಂದರು.

”ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಸುಮಾರು 7 ಸಾವಿರ ಕೊಲೆ 9 ಸಾವಿರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ 8 ಸಾವಿರ ಡಕಾಯಿತಿ 35 ಸಾವಿರ ಜನರ ಅಪಹರಣಗಳು ನಡೆದಿವೆ.

ಸುಮಾರು 23 ಹಿಂದೂ ಕಾರ್ಯಕರ್ತರ ಕೊಲೆಗಳಾಗಿವೆ” ಎಂದ ಅವರು ಕೇಳಿದರು. ”ಜೈಲಿನಲ್ಲಿರುವ 1700ಕ್ಕೂ ಹೆಚ್ಚು ಅಲ್ಪಸಂಖ್ಯಾತ ಕೈದಿಗಳನ್ನು ಬಿಡುಗಡೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಹಾಗಾದರೆ ಹಿಂದೂಗಳಲ್ಲಿ ಯಾರೂ ಅಮಾಯಕರು ಇಲ್ಲವೇ” ಎಂದು ಪ್ರಶ್ನಿಸಿದರು ಅನಂತ್ ಹೆಗಟೆ.

 

About the author

ಕನ್ನಡ ಟುಡೆ

Leave a Comment