ರಾಷ್ಟ್ರ ಸುದ್ದಿ

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಕೇವಲ ಬೂಟಾಟಿಕೆಯ ಸುಳ್ಳಿನ ಕಂತೆ : ನರೇಂದ್ರ ಮೋದಿ

ಅರುಣಾಚಲ ಪ್ರದೇಶ : ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಸಂಪೂರ್ಣ ಸುಳ್ಳಿನ ಕಂತೆಯಾಗಿದ್ದು ಕೇವಲ ಬೂಟಾಟಿಕೆಯಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ವಾರದೊಳಗೆ ಎರಡನೇ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 2004ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷ 2009ರೊಳಗೆ ಎಲ್ಲ ಮನೆಗಳಿಗೆ ವಿದ್ಯುತ್‌ ಪೂರೈಸುವ ಭರವಸೆ ನೀಡಿತ್ತು ಎಂಬುದನ್ನು ನೆನಪಿಸಿಕೊಟ್ಟರು. ಆದರೆ 2014ರ ವೇಳೆಗೆ ಕೇವಲ 18,000 ಕುಟುಂಬಗಳಿಗೆ ಮಾತ್ರವೇ ವಿದ್ಯುದೀಕರಣ ಮಾಡಲಾಯಿತು. ಆದುದರಿಂದ ಈ ಬಾರಿಯ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಕೂಡ ಹಿಂದಿನವುಗಳಂತೆ ಕೇವಲ ಬೂಟಾಟಿಕೆಯ, ಸುಳ್ಳಿನ ಕಂತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

About the author

ಕನ್ನಡ ಟುಡೆ

Leave a Comment