ರಾಷ್ಟ್ರ ಸುದ್ದಿ

ಕಾಂಗ್ರೆಸ್‌ ಜತೆಗೆ ರಾಜಿಗೆ ಸಿದ್ಧ, ಆದ್ರೆ ಒಂದು ಕಂಡೀಶನ್‌: ಅಸಾದುದ್ದೀನ್‌ ಓವೈಸಿ

ಮುಂಬಯಿ : ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ (ಮಹಾಘಟಬಂಧನ) ದಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಭಾರಿಪ್‌ ಬಹುಜನ ಮಹಾಸಂಘಕ್ಕೆ ಗೌರವಯುತ ಸಂಖ್ಯೆಯ ಸೀಟುಗಳನ್ನು ಕೊಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಪ್ಪಿದಲ್ಲಿ ಅವರೊಂದಿಗೆ ಮೈತ್ರಿಗೆ ತಾನು ಸಿದ್ಧ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್‌ ಸಂಸದರಾಗಿರುವ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ನ‌ಲ್ಲಿ ರಾಲಿಯೊಂದರಲ್ಲಿ ಮಾತನಾಡುತ್ತಿದ್ದ ಓವೈಸಿ, “ರಾಹುಲ್‌ ಗಾಂಧಿ ನಮ್ಮ ಈ ಶರತ್ತಿಗೆ ಒಪ್ಪಿದಲ್ಲಿ ಕಾಂಗ್ರೆಸ್‌ ಜತೆಗೆ ರಾಜಿಗೆ ನಾವು ಸಿದ್ಧ’ ಎಂದು ಪ್ರಕಟಿಸಿದ. “ರಾಹುಲ್‌ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಸ್ಥ ಅಶೋಕ್‌ ಚವಾಣ್‌ ಅವರಿಗೆ ಎಐಎಂಐಎಂ ಜತೆಗೆ ಏನಾದರೂ ಸಮಸ್ಯೆ ಇದ್ದರೆ ಅವರು ನನ್ನ ಹಿರಿಯ ಸಹೋದರರಾಗಿರುವ ಪ್ರಕಾಶ್‌ ಅಂಬೇಡ್ಕರ್‌ ಜತೆಗೆ ಮಾತುಕತೆ ನಡೆಸಬೇಕು’ ಎಂದು ಓವೈಸಿ ಅವರು ರಾಲಿಯಲ್ಲಿ ಮಾತನಾಡುತ್ತಾ ಹೇಳಿದರು.
 

About the author

ಕನ್ನಡ ಟುಡೆ

Leave a Comment