ರಾಜಕೀಯ

ಕಾಂಗ್ರೆಸ್, ಜೆಡಿಎಸ್ ನಾಯಕರು ದಲಿತ ದ್ವೇಷಿಗಳು: ಕೆ.ರತ್ನಪ್ರಭಾ

ಕಲಬುರ್ಗಿ: ರಾಜ್ಯದ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ದಲಿತರನ್ನು ಕಡೆಗಣಿಸಿದೆ, ಅಲ್ಲದೆ ಎರಡೂ ಪಕ್ಷದವರಿಗೆ ದಲಿತರ ಬಗೆಗೆ ದ್ವೇಷವಿದೆ ಎಂದು ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಕೆ. ರತ್ನಪ್ರಭಾ ಹೇಳಿದ್ದಾರೆ. ಅಲ್ಲದೆ ತಾನೋರ್ವ ದಲಿತಳೆನ್ನುವ ಕಾರಣಕ್ಕೇ ನನ್ನನ್ನು ತುಳಿಯಲಾಗಿತ್ತು ಎಂದು ಅವರು ಸರ್ಜಾರದ ವಿರುದ್ಧ ಗಂಭೀರ ಆರೊಪ ಮಾಡಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕು ಮುಧೋಳದಲ್ಲಿ ಬಿಜೆಪಿಯ ದಲಿತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರತ್ನಪ್ರಭಾ “ರಾಜ್ಯದಲ್ಲಿನ ಸರ್ಕಾರ ದಲಿತರ ಪರ ಕೇವಲ ತೋರಿಕೆಯ ರಾಜಕಾರಣ ಮಾಡುತ್ತಾ ಬಂದಿದೆ ನಾನೊಬ್ಬ ದಲಿತೆ ಮಹಿಳೆ ಎನ್ನುವ ಕಾರಣಕ್ಕೆ ನನ್ನನ್ನು ತುಳಿಯಲಾಗಿದೆ, 2014ರಲ್ಲೇ ನಾನು ಮುಖ್ಯ ಕಾರ್ಯದರ್ಶಿಯಾಗಬೇಕಾಗಿತ್ತು. ಆದರೆ ನನಗೆ ಮೋಸ ಮಾಡಲಾಗಿದೆ, ಕಾಟಾಚಾರಕ್ಕೆ ಎಂಬಂತೆ ಚುನಾವಣೆಗೆ ನಾಲ್ಕು ತಿಂಗಳಿದೆ ಎನ್ನುವಾಗ ನನ್ನನ್ನು ಸಿಎಸ್ ಸ್ಥಾನದಲ್ಲಿ ಕೂರಿಸಲಾಗಿತ್ತು” ಅವರು ಹೇಳಿದ್ದಾರೆ. ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರತ್ನಪ್ರಭಾ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳ ನಾಯಕರಿಗೆ ದಲಿತರ ವಿರುದ್ಧ ದ್ವೇಷವಿದೆ ಎಂದು ಹೇಳಿದ್ದಾರೆ.ಅಲ್ಲದೆ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿತ್ತು ಎಂದೂ ಅವರು ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment