ರಾಜಕೀಯ

ಕಾಂಗ್ರೆಸ್ ನಲ್ಲಿ ಯಾವುದೇ ಒಳಜಗಳಗಳಿಲ್ಲ: ಕೆ ಸಿ ವೇಣುಗೋಪಾಲ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಯಾವುದೇ ಒಳಜಗಳಗಳಿಲ್ಲ, ಮುಂಬೈಯಲ್ಲಿರುವ ಪಕ್ಷದ ಶಾಸಕರೊಂದಿಗೆ ಸಂಪರ್ಕದಲ್ಲಿರುವುದಾಗಿ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ನಮ್ಮೆಲ್ಲಾ ಶಾಸಕರ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ಈ ಎಲ್ಲಾ ನಾಟಕಗಳು ಇನ್ನು ಒಂದೆರಡು ದಿನಗಳಲ್ಲಿ ಕೊನೆಯಾಗಲಿದೆ. ನಾವೆಲ್ಲರೂ ಒಗ್ಗಟ್ಟಿನಿಂದಿದ್ದೇವೆ, ಕಾಂಗ್ರೆಸ್ ನಲ್ಲಿ ಯಾವುದೇ ಆಂತರಿಕ ಜಗಳಗಳಿಲ್ಲ, ಎಲ್ಲಾ ವದಂತಿಗಳು ಆಧಾರರಹಿತ ಎಂದಿದ್ದಾರೆ.ಕಾಂಗ್ರೆಸ್ ನೊಳಗೆ ಭಿನ್ನಮತ ಏರ್ಪಟ್ಟಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಕೆ ಸಿ ವೇಣುಗೋಪಾಲ್ ಇವೆಲ್ಲ ಕೇವಲ ಕಪೋಲಕಲ್ಪಿತ ಸುದ್ದಿಗಳಷ್ಟೆ. ಪಕ್ಷದೊಳಗೆ ಎಲ್ಲರೂ ಒಗ್ಗಟ್ಟಿನಿಂದಿದ್ದೇವೆ, ಎಲ್ಲವೂ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment