ರಾಜಕೀಯ

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯರಿಗೆ ಮಣೆ: ರಾಮಲಿಂಗಾರೆಡ್ಡಿ

ಬೆಂಗಳೂರು:  ರಾಮಲಿಂಗಾರೆಡ್ಡಿ ಏಳು ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಇದರಿಂದಾಗಿ ತಮ್ಮನ್ನು ಬೆಂಬಲಿಸದ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಯಾವುದೇ ಸ್ಥಾನಕ್ಕೂ ಲಾಬಿ ಮಾಡಿಲ್ಲ. ತಮ್ಮನ್ನು ಏಕೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಯಾರೊಂದಿಗೂ ಮಾತನಾಡಿಲ್ಲ. ಆದರೆ ಪಕ್ಷದ ವಿರುದ್ಧ  ಅಸಮಾಧಾನಗೊಂಡು ಸಭೆ ನಡೆಸುತ್ತಿದ್ದ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಅವರಂತಹ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡು ತಮ್ಮನ್ನು ಕೈ ಬಿಡಲಾಗಿದೆ ಎಂದರು.

ಹೊಸಬರಿಗೆ ಅವಕಾಶ ಮಾಡಿಕೊಳ್ಳಲು ಹಿರಿಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಹಿರಿಯ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ, ಆರ್. ವಿ. ದೇಶಪಾಂಡೆ, ಪರಮೇಶ್ವರ್, ಡಿ. ಕೆ. ಶಿವಕುಮಾರ್, ಜಾರ್ಜ್ ಅವರಿಗೆ ಅನ್ವಯವಾಗದಿರುವುದು ನನಗೆ ಮಾತ್ರ ಏಕೆ ಅನ್ವಯವಾಗುತ್ತದೆ. ಇದು ನಮ್ಮನ್ನು ಕಡೆಗಣಿಸುವ ಭಾಗವಾಗಿದೆ ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್  ಪಕ್ಷಕ್ಕೆ ಇತ್ತೀಚಿಗೆ ಸೇರ್ಪಡೆಯಾದವರಿಗೆಲ್ಲಾ ಸಚಿವ ಸ್ಥಾನ ನೀಡಲಾಗಿದೆ.

ನಾಯಕತ್ವದ ವಿರುದ್ಧ ಧ್ವನಿ ಎತ್ತಿದವರಿಗೆ ಸ್ಥಾನ ನೀಡಲಾಗಿದೆ. ಆದರೆ ದಶಕಗಳಿಂದಲೂ ಪಕ್ಷಕ್ಕಾಗಿ ದುಡಿದ ತಮ್ಮನ್ನು ಕಡೆಗಣಿಸಲಾಗಿದೆ ಪಕ್ಷದ ನಾಯಕರ ವಿರುದ್ಧ ತಮ್ಮಗೆ ನೋವಾಗಿದೆ. ಪ್ರಾಮಾಣಿಕತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.ಆದಾಗ್ಯೂ, 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿಯೇ  ಇದ್ದು, ಮುಂದೆನೂ ಅಲ್ಲಿಯೇ ಇರುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ  ಕಾರ್ಯನಿರ್ವಹಿಸುತ್ತೇನೆ. ಆದರೆ ತಮ್ಮನ್ನು ಬೆಂಬಲಿಸದ ನಾಯಕರ ವಿರುದ್ಧವಷ್ಟೇ ತಮ್ಮ ಅಸಮಾಧಾನ ಎಂದು ರಾಮಲಿಂಗಾರೆಡ್ಡಿ ಸ್ಪಷ್ಪಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment