ರಾಷ್ಟ್ರ

ಕಾಂಗ್ರೆಸ್ ಪಕ್ಷದಿಂದ ದೇಶವನ್ನು ಮುನ್ನಡೆಸಲು ಮಾತ್ರ ಸಾಧ್ಯ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಪಕ್ಷವೊಂದೆ ಇಡೀ ದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.ಇಂದು ದೇಶ ಸಣ್ಣ ಸಣ್ಣ ವಿಷಯಗಳಿಗೆ ಸಂಬಂಧಪಟ್ಟಂತೆ ಇಬ್ಭಾಗವಾಗುತ್ತಿದ್ದು ಎಲ್ಲಾ ಗುರುತುಗಳು ಬೆದರಿಕೆಗೆ ಒಳಗಾಗುತ್ತಿವೆ.

ಬಿಜೆಪಿಯವರು ಸಿಟ್ಟು ಆಕ್ರೋಶಗಳನ್ನು ಬಳಸುತ್ತಿದ್ದಾರೆ ನಾವು ಪ್ರೀತಿಯನ್ನು ಬಳಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾನು ಒಂದು ವಿಷಯ ಹೇಳಬಯಸುತ್ತೇನೆ ಅದೆಂನೆರೆ ಈ ದೇಶ ಪ್ರತಿಯೊಬ್ಬರಿಗೂ ಸೇರಿರುವುದಾಗಿದ್ದು ಕಾಂಗ್ರೆಸ್ ಏನು ಮಾಡುವುದಿದ್ದರೂ ದೇಶದ ಜನತೆಯ ಒಳಿತಿಗಾಗಿ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ನಿನ್ನೆ ಆರಂಭಗೊಂಡ ಕಾಂಗ್ರೆಸ್ ನ ಸಮಗ್ರ ಅಧಿವೇಶನದ ಎರಡನೇ ದಿನವಾದ ಇಂದು ಮಾತನಾಡಿದ ರಾಹುಲ್ ಗಾಂಧಿ ಹೊಸ ದಿಕ್ಕು ಮತ್ತು ಹೊಸ ದೃಷ್ಟಿಕೋನದತ್ತ ಸಾಗಲು ಇದು ಸರಿಯಾದ ಸಮಯವಾಗಿದೆ ಎಂದು ಹೇಳುತ್ತಾ  ದೇಶದ ರೈತರ ಸಮಸ್ಯೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಕುರಿತು ಕೂಡ ಚರ್ಚೆ ನಡೆಸಿದರು.

ಅಧಿವೇಶನದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment