ರಾಜಕೀಯ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ರದ್ದು: ರಾಮಲಿಂಗಾರೆಡ್ಡಿ

ಬೆಂಗಳೂರು: ಮಾಜಿ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ರದ್ದಾಗಿದೆ. ನಿನ್ನೆ ರಾತ್ರಿ ಕರೆ ಮಾಡಿ ಇಂದು ಬೆಳಗ್ಗೆ ಸಭೆ ಇರುವುದಾಗಿ ಹೇಳಿದ್ದರು, ಆದರೆ ನಂತರ ಸಭೆ ನಡೆಸದಿರಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶನಿವಾರ ಶಾಸಕಾಂಗ ಸಭೆ ನಡೆಸಿದ ಬಳಿಕ ರೆಸಾರ್ಟ್ ನಲ್ಲಿ ಹೊಸಪೇಟೆ ಹಾಗೂ ಕಂಪ್ಲಿ ಶಾಸಕರ ನಡುವೆ ಹೊಡೆದಾಟವಾದ ಹಿನ್ನೆಲೆ ಇಂದು ಸಿದ್ದರಾಮಯ್ಯ ಮತ್ತೊಮ್ಮೆಶಾಸಕಾಂಗ ಸಭೆ ಕರೆದಿದ್ದರು, ಜೊತೆಗೆ ಶಾಸಕರ ಹಾಜರಾತಿ ಕೂಡ ಕಡ್ಡಾಯ ಎಂದು ಹೇಳಲಾಗಿತ್ತು.

About the author

ಕನ್ನಡ ಟುಡೆ

Leave a Comment