ರಾಷ್ಟ್ರ ಸುದ್ದಿ

ಕಾಂಗ್ರೆಸ್ ಸೇರುವಂತೆ ದಿಗ್ವಿಜಯ್ ಸಿಂಗ್ ನನಗೆ ಆಹ್ವಾನಿಸಿದ್ದರು: ಬಿಜೆಪಿ

ಭೂಪಾಲ್: ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ತಮ್ಮ ಪಕ್ಷ ಸೇರುವಂತೆ ನನಗೆ ಆಹ್ವಾನ ನೀಡಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಬಾಬುಲಾಲ್ ಗೌರ್ ಹೇಳಿದ್ದಾರೆ.
ಡಿಸೆಂಬರ್ 18 ರಂದು ನನ್ನನ್ನು ಭೇಟಿ ಮಾಡಿದ್ದ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಟಿಕೆಟ್ ನಿಂದ ಭೂಪಾಲ್ ನಿಂದ ಸ್ಪರ್ದಿಸುವಂತೆ ಕೇಳಿದ್ದರು, ಇದರ ಬಗ್ಗೆ ಯೋಚಿಸಿ ನಂತರ ನಿರ್ಧಾರ ಕೈಗೊಳ್ಳುವುದಾಗಿ ನಾನು ತಿಳಿಸಿದ್ದೆ ಎಂದು ಬಾಬುಲಾಲ್ ಕೌರ್ ತಿಳಿಸಿದ್ದಾರೆ, ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆ 6ರಿಂದ 7 ಹಂತಗಳಲ್ಲಿ ನಡೆಯಲಿದ್ದು, ಮೇ ತಿಂಗಳ ಅಂತ್ಯದೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

About the author

ಕನ್ನಡ ಟುಡೆ

Leave a Comment