ರಾಜಕೀಯ

ಕಾಂಗ್ರೇಸ್ ಕಾರ್ಯಕರ್ತರಿಂದ ಪೋಲೀಸರ ಮೇಲೆ ಹಲ್ಲೆ: ಬಳ್ಳಾರಿ

ಬಳ್ಳಾರಿ:  ಹೊಸಪೇಟೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ಬೆಂಬಲಿಗರ ನಡುವೆ ನಿನ್ನೆ ತಡ ರಾತ್ರಿ ಗಲಾಟೆ ನಡೆದಿದ್ದು, ಗಲಾಟೆ ತಡೆಯಲು ಬಂದ ಪೊಲೀಸರ ಮೇಲೆಯೇ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಶಾಸಕ ಆನಂದ್ ಸಿಂಗ್ ಮತ್ತು ಮಾಜಿ ಸಚಿವ ಸಂತೋಷ್ ಲಾಡ್ ಬೆಂಬಲಿಗರು ನಿನ್ನೆ ರಾತ್ರಿ 11.30ರ ಸುಮಾರಿಗೆ ಹೊಸಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪೇದೆಗಳ ಮೇಲೆ ಈ ಗುಂಪು ಹಲ್ಲೆ ನಡೆಸಿದೆ.

ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದವರನ್ನು ಇಂದೇ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಎರಡೂ ಗುಂಪಿನ ಸದಸ್ಯರು ಆನಂದ್ ಸಿಂಗ್ ಮತ್ತು ಸಂತೋಷ್ ಲಾಡ್ ಅವರ ಬೆಂಬಲಿಗರು ಎನ್ನಲಾಗುತ್ತಿದ್ದು, ಶಾಸಕರು ಮತ್ತು ಮಾಜಿ ಸಚಿವರಿಂದ ಘಟನೆ ಬಗ್ಗೆ ಈ ವರೆಗೆ ಪ್ರತಿಕ್ರಿಯೆ ದೊರೆತಿಲ್ಲ.

 

About the author

ಕನ್ನಡ ಟುಡೆ

Leave a Comment