ರಾಜಕೀಯ

ಕಾಂಗ್ರೇಸ್ ಮತ್ತೆ ಗೆಲ್ಲುತ್ತೋ ಬಿಡುತ್ತೋ ಕೋಮುವಾದಿಗಳಿಗೆ ಮಾತ್ರ ಬಿಡೊಲ್ಲ: ಸಿದ್ದರಾಮಯ್ಯ

ಬೆಂಗಳೂರು: ಗೋ ಹತ್ಯೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿತ್ತು. ನಾನು ಯಾವತ್ತೂ ಗೋ ಮಾಂಸ ಸೇವಿಸಿಲ್ಲ. ತಿನ್ನಬೇಕು ಅಂದರೆ ತಿನ್ನುತ್ತೇನೆ. ನನ್ನ ಆಹಾರದ ಹಕ್ಕನ್ನು ಕೇಳಲು ನೀವ್ಯಾರು..? ಎಂದು ಮತ್ತೆ ಸಿಎಂ ಸಿದ್ದರಾಮಯ್ಯ ಗೋಮಾಂಸದ ವಿಚಾರವೆತ್ತಿದ್ದಾರೆ. ಸಾಮಾಜಿಕ ನ್ಯಾಯದ ರಥ ಮುಂದೆ ಸಾಗಬೇಕು ಅಂದರೆ ಕೋಮುವಾದಿಗಳು ಸೋಲಬೇಕು. ಅವಕಾಶವಾದಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

ಕೋಮುವಾದಿಗಳು ಇಡೀ ದೇಶವನ್ನು ಆಕ್ರಮಿಸಿಕೊಳ್ಳಲು ಹೊರಟಿದ್ದಾರೆ. ಕರ್ನಾಟಕದ ಮೇಲೆ ಅವರ ದೃಷ್ಟಿ ನೆಟ್ಟಿದ್ದಾರೆ. ಸಿದ್ದರಾಮಯ್ಯ ರಕ್ತದಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎನ್ನುತ್ತಾರೆ. ಆರ್ ಎಸ್ ಎಸ್ ಸಂಸ್ಕಾರ ಕಲಿಸಿಕೊಟ್ಟಿದೆ ಅಂತಾರೆ, ಇದೇನಾ ಸಂಸ್ಕಾರ.? ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು, ನಾನು ಮುಖ್ಯಮಂತ್ರಿ ಆಗುವುದು ಆಮೇಲಿನ ವಿಚಾರ. ಆದರೆ ಕೋಮುವಾದಿಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment