ರಾಷ್ಟ್ರ ಸುದ್ದಿ

ಕಾಜಿರಂಗದಲ್ಲಿ ಕೊಂಬು ಕಿತ್ತಿದ್ದ ಸ್ಥಿತಿಯಲ್ಲಿ ಮರಿ ಖಡ್ಗಮೃಗದ ಶವ ಪತ್ತೆ

ದಿಸ್‌ಪುರ್‌: ಖಡ್ಗಮೃಗಗಳ ಸಂತತಿ ದಿನೇದಿನೇ ಕ್ಷೀಣಿಸುತ್ತಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾವನದಲ್ಲಿ ಕೊಂಬು ಕಿತ್ತಿದ್ದ ಸ್ಥಿತಿಯಲ್ಲಿ ಮರಿ ಖಡ್ಗಮೃಗದ ಶವ ಪತ್ತೆಯಾಗಿದ್ದು, ಪ್ರಾಣಿ ಪ್ರಿಯರ ಕರುಳು ಹಿಂಡುವಂತಿದೆ. ಅಸ್ಸಾಮ್‌ನಲ್ಲಿ ನಿರಂತರವಾಗಿ ಖಡ್ಗಮೃಗದ ಬೇಟೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. 2018ರಲ್ಲಿ ದಾಖಲಾದ 6ನೇ ಪ್ರಕರಣವಿದು.

ಬಗೋರಿ ಪ್ರದೇಶಕ್ಕೆ ಸೇರಿದ ಭಾಲುಕ್‌ಜನ್‌ನಲ್ಲಿ ಖಡ್ಗಮೃಗದ ಶವ ಪತ್ತೆಯಾಗಿದೆ. ದುರುಳ ಬೇಟೆಗಾರರು ಖಡ್ಗಮೃಗದ ಕೊಂಬನ್ನು ಕಿತ್ತು ತೆಗೆದಿದ್ದಾರೆ. ಖಡ್ಗಮೃಗದ ಕೊಂಬಿಗಾಗಿ ಅವುಗಳ ಹತ್ಯೆ ಮುಂದುವರಿದಿದೆ ಎಂದು ಅರಣ್ಯ ಅಧಿಕಾರಿ ರೋಹಿಣಿ ಸೈಕಿಯಾ ಬೇಸರ ವ್ಯಕ್ತ ಪಡಿಸಿದ್ದಾರೆ. ಮೃಗದ ದೇಹದಲ್ಲಿ ಹೊಕ್ಕಿದ್ದ ಬುಲೆಟ್‌ ಪತ್ತೆಯಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ರೋಹಿಣಿ ತಿಳಿಸಿದ್ದಾರೆ. ಕಾಜಿರಂದಲ್ಲಿ 2013ರಿಂದ 2014ರ ನಡುವೆ ಪ್ರತೀ ವರ್ಷ 27 ಖಡ್ಗಮೃಗಗಳನ್ನು ಕೊಂಬಿಗಾಗಿ ಹತ್ಯೆ ಮಾಡಲಾಗಿದೆ. 2015 ರಲ್ಲಿ 17 ಖಡ್ಗಮೃಗಗಳನ್ನು ಹತ್ಯೆ ಮಾಡಿದ ಪ್ರಕರಣ ದಾಖಲಾಗಿದೆ. 2016 ರಲ್ಲಿ 18 ಖಡ್ಗಮೃಗಗಳನ್ನು ಕೊಲ್ಲಲಾಗಿದೆ. ಕಳೆದ ವರ್ಷ 6 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಖಡ್ಗಮೃಗ ಹತ್ಯೆ 6 ಕ್ಕೆ ತಲುಪಿದೆ.

About the author

ಕನ್ನಡ ಟುಡೆ

Leave a Comment