ಸುದ್ದಿ

ಕಾಟನ್​ಪೇಟೆ ಹಾಗೂ ಚಾಮರಾಜಪೇಟೆ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಫೈರಿಂಗ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿ ಶೀಟರ್ ಗಳ ವಿರುದ್ಧ ಪೊಲೀಸರ ಬಂದೂಕು ಮಾತನಾಡುತ್ತಿವೆ. ಕುಖ್ಯಾತ ರೌಡಿ ಶೀಟರ್ ನಿರ್ಮಲ್ ಕಾಲಿಗೆ ಬೆಂಗಳೂರು ಪೊಲೀಸರು ಗುಂಡು ಹಾರಿಸಿದ್ದಾರೆ. ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಲ ಅಲಿಯಾಸ್​ ರೂಪೇಶ್​ ಎಂಬ ರೌಡಿಶೀಟರ್ ನನ್ನು ಹುಡುಕುತ್ತಿದ್ದ ಪೊಲೀಸರಿಗೆ ಆತ ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಜಿಂಕೆ ಪಾರ್ಕ್ ಸಮೀಪದ ಪಾಳುಬಿದ್ದ ಮನೆಯಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿದೆ. ಕೂಡಲೇ ಅಲರ್ಟ್ ಆದ ಕಾಟನ್ ಪೇಟೆ ಪೊಲೀಸರು ಚಾಮರಾಜ ಪೇಟೆ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಜಿಂಕೆ ಪಾರ್ಕ್​ ಬಳಿ ಪಾಳುಬಿದ್ದ ಮನೆಯಲ್ಲಿ ಈತನಿರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಮುಂದಾದ ವೇಳೆ ಕಾಟನ್​ಪೇಟೆ ಠಾಣೆಯ ಪೇದೆ ಕುಮಾರ್​ಗೆ ಆರೋಪಿ ನಿರ್ಮಲ್ ಚಾಕು ಇರಿದಿದ್ದಾನೆ. ಆರೋಪಿಯನ್ನು ಹಿಡಿಯಲು ಚಾಮರಾಜಪೇಟೆ ಇನ್ಸ್​ಪೆಕ್ಟರ್​ ಪ್ರಶಾಂತ್​ ಹಾಗೂ ಕಾಟನ್​ಪೇಟೆ ಇನ್ಸ್​ಪೆಕ್ಟರ್​ ಕುಮಾರಸ್ವಾಮಿಯಿಂದ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ. ರೌಡಿಶೀಟರ್​ ಎಡಗಾಲಿಗೆ ಒಂದು ಗುಂಡು ಹೊಕ್ಕಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರೂಪೇಶ್ ಜತೆಯಿದ್ದ ಮತ್ತೊಬ್ಬ ಆರೋಪಿ ಕಿಚ್ಚ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

 

 

About the author

ಕನ್ನಡ ಟುಡೆ

Leave a Comment